ಒಟ್ಟು ನೋಟಗಳು

Monday, May 29, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ -19


ಇತ್ತು ಯೋಗಿನಿಯರಿಗೆ ವರವನು । ಕೀರ್ತಿ ಔದುಂಬರವ ವರ್ಣಿಸಿ ।
ಮತ್ತೆ ಸಂಗಮಕ್ಕಾಗಿ ಹತ್ತೊಂಬತ್ತರಲಿ ಬಂದಾ  ।। 19  ।।

ಮುಂದೆ ಗುರುಗಳು ನರಸೋಬವಾಡಿಯಲ್ಲಿದ್ದು, ಕೃಷ್ಣಾ ಮತ್ತು ಪಂಚಗಂಗಾ ಸಂಗಮದಲ್ಲಿ ಸ್ನಾನ ಮಾಡಿ ಧ್ಯಾನ ನಿರತರಾಗಿರುವಾಗ, ಅರವತ್ತನಾಲ್ಕು ಯೋಗಿನಿಯರು ಬಂದು, ಗುರುವನ್ನು ಸೇವಿಸಿ - ಗುರುಗಳನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ಸೇವೆ ಮಾಡುತ್ತಿದ್ದರು. ಸಂಗಮವು ಗುರುಗಳಿಗೆ ದಾರಿ ಬಿಟ್ಟು ಕೊಡುತ್ತಿತ್ತು. ಒಂದು ದಿನ ಗಂಗಾನುಜನೆಂಬ ಒಬ್ಬ ರೈತನು ಇದನ್ನು ನೋಡಿದನು. ನದಿ ದಾರಿ ಬಿಟ್ಟು ಕೊಟ್ಟಾಗ ಆತನೂ ಗುರುಗಳ ಹಿಂದೆ ಸಾಗಿ, ಅಲ್ಲಿ ವೈಭವೋಪೇತವಾದ ಮಹಾನಗರಿಯನ್ನು ಕಂಡು, ಗುರುಗಳು ಸಾಮಾನ್ಯರಲ್ಲ, ಸಿದ್ಧ ಪುರುಷರೆಂಬುದನ್ನು ಅರಿತು ಅವರಿಗೆ ನಮಿಸುತ್ತಾನೆ. ಗುರುಗಳು ಮಂದಹಾಸ ಬೀರುತ್ತಾ ಆತನನ್ನು ಹರಸಿ, 'ಈ ವಿಷಯವನ್ನು ಯಾರಲ್ಲಿಯೂ ತಿಳಿಸಬೇಡ. ಹಾಗೆ ಒಂದು ವೇಳೆ ಪ್ರಕಟಪಡಿಸಿದರೆ ಅಂದೇ ನಿನ್ನ ಕೊನೆಯಾಗುತ್ತದೆ' ಎಂದು ಹೇಳುವ ವಿಶೇಷ ಪ್ರಸಂಗವು ಹತ್ತೊಂಬತ್ತನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment