ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 70
ದೂರ ನಿಂತೇ ದಾರಿ ಸುಗಮವಾಗಿಸಿದ ಸದ್ಗುರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
"ನಾನು ಗುರುವೆಂದು ಹೆಂಗೆ ನಂಬುವುದು? ಇವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಆದರೆ ಪ್ರಮಾಣ ಬೇಕಲ್ಲ. ಅವರು ನನಗೆ ಗುರುಗಳಾಗಬೇಕಾದರೆ, ಅವರು ಇಂಗ್ಲೀಷ್ ನಲ್ಲಿ ನನ್ನ ಜೊತೆ ಮಾತನಾಡಬೇಕು'" ಎಂದು ಮನದಲ್ಲೇ ಆ ಭಕ್ತರು ಅದೇಕೆ ಚಿಂತಿಸಿದರೋ? ಭಗವಂತನೇ ಬಲ್ಲ. ಗುರುವೆಂದು ನಾರಾ ರೂಪಿಯನ್ನು ಒಪ್ಪಲು ಒಬ್ಬೊಬ್ಬರು ಒಂದೊಂದು ರೀತಿಯ ನಿಯಮಗಳನ್ನು ಗುರುವಿನ ಮೇಲೆ ಹೇರುತ್ತಾರೋ, ತಮ್ಮ ಮೇಲೇ ಪ್ರತಿಬಂಧಗಳನ್ನು ವಿಧಿಸಿಕೊಳ್ಳುತ್ತಾರೋ!
ಅದೃಷ್ಟ ನೆಟ್ಟಗಿದ್ದರೆ ಎಲ್ಲಾ ಸರಿಯೇ ಆಗಿಬಿಟ್ಟು, ಗುರುಕರುಣೆಗೆ ಪಾತ್ರರಾಗಬಹುದು. ಅದೃಷ್ಟ ನೆಟ್ಟಗಿರದಿದ್ದರೆ? ಮತ್ತದೆಷ್ಟು ದಿನ ಗುರುವಿಗಾಗಿ, ಅಳೆಯಬೇಕಾಗುತ್ತೋ? ಬ್ರಹ್ಮ ಚೈತನ್ಯರನ್ನು ಅರಸಿ ಬಂದ ಬ್ರಹ್ಮಾನಂದರಂತಹ ಸಾಧಕರುಗಳೇ ಮಾಯೆಗೊಳಗಾಗಿ "ಇವನೆಂತಹ ಗುರು..... ಗುರು ಹೀಗೂ ಇರುವುದುಂಟೆ" ಎಂದು ಮರಳಿದವರು, ಮತ್ತೆ ಆ ಮರುಳು ಹರಿದಾಗ, ಗುರುಕಾರುಣ್ಯ ದೊರೆತಾಗ, ಬ್ರಹ್ಮ ಚೈತನ್ಯರ ಅಗ್ರಮಾನ್ಯ ಶಿಷ್ಯರಾಗಲಿಲ್ಲವೇ? ಇನ್ನು ಸಾಮಾನ್ಯರ ಗತಿ ಏನು? ಆದರೆ, ನಮ್ಮ ಗುರುನಾಥರು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಕೃಪೆ ತೋರಿ ಉದ್ಧರಿಸಿದ್ದಾರೆ. ಹಾಗಾಗಿ, ಮೈಸೂರಿನ ವಿದ್ಯಾಶಂಕರ್ ಅವರ, ಗುರುನಾಥರ ಮೊದಲ ಭೇಟಿ ಅವರಿಗೆ ಅಪಾರವಾದದ್ದನ್ನೇ ನೀಡಿತಂತೆ. ಗುರುನಾಥರ ಸಹವಾಸ, ಸಾಮೀಪ್ಯ ಅತಿ ಕಡಿಮೆ ಆವರ್ತನಗಳಿದ್ದಾದರೂ ದೂರ ನಿಂತೇ ಶಿಷ್ಯನ ದಾರಿ ಸುಗಮ ಮಾಡುತ್ತಾ ಅವರನ್ನು ತಿದ್ದಿದ ವಿಚಾರಗಳೇ ನಮ್ಮ ಇವತ್ತಿನ ನಿತ್ಯ ಸತ್ಸಂಗ.
ಅವರೇನೂ ಹೇಳುತ್ತಾರೋ ಆಲಿಸೋಣ ಬನ್ನಿ.....
"ಅದೇಕೆ ನನ್ನ ಮನಸ್ಸಿನಲ್ಲಿ ಆ ರೀತಿಯ ವಿಚಾರಗಳು ಅಂದು ಬಂತೋ... ನೇರವಾಗಿ ಗುರುನಾಥರ ಮನೆ ತಲುಪಿದ್ದೇ ತಡ, ಗುರುನಾಥರ ದರ್ಶನವಾಯಿತು. ಭಕ್ತಿಯಿಂದ ನಮಸ್ಕರಿಸಿದೆ. 'ವಾಟ್ ಇಸ್ ಯುವರ್ ನೇಮ್? ವೈ ಯು ಕೇಮ್ ಹಿಯರ್ ? ನೀನು ಮೈಸೂರಿನವನಲ್ಲವಾ? ನಿಮ್ಮ ಮನೆ ವಿದ್ಯಾರಣ್ಯಪುರಂ ಸೆಕೆಂಡ್ ಮೈನ್ ನಲ್ಲಿ ಇತ್ತಲ್ಲವೇ? ನಿಮ್ಮ ಮನೆಯ ಮೇಲೆ ಜಿಂಕ್ ಶೀಟ್ ಇತ್ತಲ್ಲವಾ? ನಿಮ್ಮ ಮನೆ ಎದುರು ಕೋಮಲಮ್ಮ ಎಂಬುವ ಐಯಂಗಾರ್ ಹೆಂಗಸರಿದ್ದರಲ್ಲವಾ? ನೀನು ಅವರ ಮೆನೆಗೆ ಹಾಲು ತೆಗೆದುಕೊಂಡು ಹೋಗಿ ಐಸ್ ಕ್ರೀಮ್ ಮಾಡಿಕೊಳ್ಳುತ್ತಿದ್ದೆ ಅಲ್ಲವಾ? ನಿಮ್ಮ ತಂದೆಗೆ ಐದು ಜನ ಅಣ್ಣ ತಮ್ಮಂದಿರಲ್ಲವಾ? .... ಸಾಕಾ, ಇನ್ನೂ ಏನಾದರೂ ಬೇಕಾ.... ? ಗುರುನಾಥರು ಪ್ರಶ್ನೆಗಳ ಮಳೆ ಸುರಿಸಿದರು. ನಾನು ಅವರ ಪ್ರಶ್ನೆಗಳಿಗೆ, ಹೌದು ಹೌದೆನ್ನುವುದಲ್ಲದೇ ಇನ್ನೇನು ನುಡಿಯಲು ಸಾಧ್ಯ? ಮೊದಲ ಬ್ಯಾಟಿಂಗ್ ನಲ್ಲೇ ನಾನು ಔಟಾಗಿ ಗುರುಚರಣದಲ್ಲಿ ತಲೆ ಇಟ್ಟೆ. ನನ್ನ ಕನಸು ಮನಸ್ಸಿನಲ್ಲೂ ನಾನು ನೆನಸಿರಲಿಲ್ಲ. ಗುರುಕರುಣೆ, ನನ್ನ ಮನದ ಅನುಮಾನಗಳನ್ನೆಲ್ಲಾ ಹೊಡೆದೋಡಿಸಿ ನನ್ನನ್ನು ಮೂಕ ವಿಸ್ಮಿತನಾಗಿಸಿತ್ತು.
ಸರ್ವಾಂತರ್ಯಾಮಿಯಾದ ಗುರುವಿಗೆ ಮನ ಬಂತೆಂದರೆ, ಕುಳಿತಲ್ಲಿಂದಲೇ ತಮ್ಮ ಶಿಷ್ಯರಿಗೆ ತಿದ್ದಿ ಬುದ್ಧಿ ಹೇಳುತ್ತಾರೆಂಬುದಕ್ಕೆ ವಿದ್ಯಾಶಂಕರ್ ಅವರ ಜೀವನದ ಅನೇಕ ಘಟನೆಗಳೇ ಸಾಕ್ಷಿ. ಎಡುವುವ ಅನೇಕ ಸಂದರ್ಭದಲ್ಲಿ, ಗುರುನಾಥರು ಕೈ ಹಿಡಿದು ಸರಿ ಮಾರ್ಗವನ್ನು ತೋರಿಸಿದ್ದರಂತೆ. ಭಾವಶುದ್ಧಿ ಒಂದಿದ್ದರೆ ಸಾಕೆಂಬ ಮಾತಿನಂತೆ "ನಾನಿವತ್ತು ಏನಾದರೂ ಹೀಗೆ ಆನಂದವಾಗಿ ಬಾಳುತ್ತಿದ್ದರೆ, ಅದು ಗುರುನಾಥರ ಕರುಣೆಯಿಂದಲೇ. ದೂರದಿಂದಲೇ ಸರಿಯಾದ ಉಳಿಪೆಟ್ಟುಗಳನ್ನು ಕೊಟ್ಟು ಎಚ್ಚರಿಸಿದ್ದಾರೆ, ಮನುಷ್ಯನನ್ನಾಗಿಸಿದ್ದಾರೆ. ನಾನದೆಷ್ಟು ಚಿರಋಣಿಯಾಗಿದ್ದರೂ ಸಾಲದು" ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಇಂದೂ ಗುರುನಾಥರೆಲ್ಲೂ ಹೋಗಿಲ್ಲ. ನಮ್ಮ ಜೊತೆಗೆ ಇದ್ದು ನಮ್ಮನ್ನು ಇವತ್ತೂ ತಿದ್ದುತ್ತಿದ್ದಾರೆ - ಎಂಬುದವರ ನಂಬಿಕೆಯಾಗಿದೆ.
ಅಮೂಲ್ಯವಾದುದನ್ನು ಕಳೆದುಕೊಂಡಿದ್ದೀರಾ?
ಸಂಜೆ 7 ಗಂಟೆ. ಅಂದು ಗುರುನಾಥರ ಮನೆ ಆರ್ತರಿಂದ, ಭಕ್ತ ಮಹಾಶಯರುಗಳಿಂದ ತುಂಬಿತ್ತು. ಇಬ್ಬರು ಅಣ್ಣತಮ್ಮಂದಿರು, ಅವರ ಹೆಂಗಸರು, ಮಕ್ಕಳುಗಳೆಲ್ಲಾ ಆಗ ತಾನೇಗುರುನಾಥರ ಒಡ್ಡೋಲಗಕ್ಕೆ ಬಂದು ಕುಳಿತರು. ಸಾಕಷ್ಟು ಸ್ಥಿತಿವಂತರು. ಭಗವಂತ ಬೇಕಾದಷ್ಟನ್ನು ಕೊಟ್ಟು ಮರೆತಿದ್ದ. ಆದರೂ ಅದೇನೋ ಕಳವಳ ಮನಸ್ಸಿಗೆ. ನೆಮ್ಮದಿಯೇ ಇರಲಿಲ್ಲ. ಸಂಕಟ ಬಂದಾಗಲೇ ವೆಂಕಟರಮಣನನ್ನು ನಾವು ನೆನೆಯುವುದಲ್ಲವೇ? ಗುರುನಾಥರ ಬಳಿ ತಮಗೆ ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆಂಬ ಭರವಸೆಯಿಂದ ಬಂದಿದ್ದರು. ಇವರ ಸರದಿ ಬಂದಿತು. ಗುರುನಾಥರಿಗೆ ನಮಸ್ಕರಿಸಿದರು. ಅವರು ಬಾಯಿ ಬಿಡುವ ಮೊದಲೇ "ನೀವೊಂದು ಅತ್ಯುತ್ತಮವಾದ ವಸ್ತುವೊಂದನ್ನು ಕಳೆದುಕೊಂಡಿದ್ದೀರಿ. ಅರ್ಥವಾಗಿದೆಯಾ. ಅದ್ಯಾವುದೆಂದು? ನಿಮ್ಮ ಎಲ್ಲ ಸಮಸ್ಯೆ - ಚಿಂತೆಗೆ ಅದೇ ಕಾರಣ. ಅದ್ಯಾವುದು ಯೋಚಿಸಿ ಹೇಳಯ್ಯಾ" ಎಂದು ನೇರವಾಗಿ ಗುರುನಾಥರಂದರಂತೆ.
ಮನೆಯವರೆಲ್ಲಾ ಏನು ಕಳೆದುಕೊಂಡಿದ್ದೀವಿ... ನಗ, ನಾಣ್ಯ, ಬಂಗಾರ, ಮುತ್ತು, ವಜ್ರ, ವೈಢೂರ್ಯ... ಎಂದು ಎಲ್ಲಾ ರೀತಿ ಚಿಂತಿಸಿದರು. ಅಂತಹ ಅದ್ಯಾವ ವಸ್ತುಗಳೂ ಮನೆಯಿಂದ ಕಳವು ಆಗಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಅಲ್ಲದೆ ಸರ್ಪಗಾವಲಿನ ಗಾರ್ಡ್ ಗಳು ಮನೆಯಲ್ಲೆಲ್ಲಾ ಕಣ್ಗಾವಲಿನ ವ್ಯವಸ್ಥೆ ಇದೆ. ಹಾಗಾಗಿ ಕೊನೆಗೆ ತೀರ್ಮಾನಿಸಿ "ಇಲ್ಲ ಗುರುನಾಥರೇ, ಏನೂ ಕಳೆದುಕೊಂಡಿಲ್ಲ... ಎಲ್ಲಾ ಮನೆಯಲ್ಲಿ ಸರಿಯಾಗಿದೆ" ಎಂದುಬಿಟ್ಟರು.
ಗುರುನಾಥರು ಮತ್ತೆ ಹೇಳಿದರು. "ಇಲ್ಲ ನೋಡ್ರಯ್ಯ, ಒಂದು ಬಹು ಅಮೂಲ್ಯವಾದದ್ದನ್ನು ಕಳೆದುಕೊಂಡಿದೀರಿ. ಯೋಚಿಸಿ" ಎಂದರು. ಕೊನೆಗೆ "ಅಲ್ಲಯ್ಯಾ, ಇಷ್ಟೆಲ್ಲಾ ಇದ್ದರೂ ನಿಮ್ಮ ಮುದಿತಾಯಿಯನ್ನು ದೂರ ಇಟ್ಟು, ವೃದ್ಧಾಶ್ರಮ ಸೇರಿಸಿದ್ದೀರಲ್ಲಯ್ಯಾ? ಆ ಮಹಾನ್ ವಸ್ತುವನ್ನು ಕಳಕೊಂಡ ನಿಮಗೆ ನೆಮ್ಮದಿ ಹೇಗೆ ಸಿಗುತ್ತೆ? ಎನ್ರಮ್ಮಾ, ಸೊಸೆಯಂದಿರಾ, ಇದು ಸರೀನಾ? ನನಗೆ ನಮಸ್ಕಾರ ಮಾಡುವುದಕ್ಕೂ ನಿಮಗೆ ಯೋಗ್ಯತೆ ಇಲ್ಲ. ಈ ಕೂಡಲೇ ಆ ತಾಯಿಯನ್ನು ಕರೆದುಕೊಂಡು ಬನ್ನಿ. ಒಂದು ಕ್ಷಣ ನೀವಿಲ್ಲಿ ಕೂರಕೂಡದು" ಎಂದು ಗುರುನಾಥರು ಬುದ್ಧಿವಾದ ಹೇಳಿದರು.
ಎಲ್ಲ ಮೀರಿ ನಿಂತವರಿಗೆ ಯಾರ ಹಂಗೇನು? ಸತ್ಯ, ಧಾರ್ಮ, ನೀತಿ, ಅವರ ರೀತಿ, ನೇರ ದಿಟ್ಟ ನುಡಿ ಅವರ ಮೋಡಿ. ಅಂತಹ ಗುರುನಾಥರ ಮಾತನ್ನು ಮೀರುವವರಾರಿದ್ದಾರೆ?
ಪ್ರಿಯ ಓದುಗ ಗುರುಬಾಂಧವರೇ, ನಾಳಿನ ಸಂಚಿಕೆಗೆ ನಮ್ಮೊಂದಿಗಿರಿ. ಅಂದು ಸಂಜೆ ಗುರುನಾಥರ ಮುಂದೆ ತನ್ನ ಅಳಲನ್ನು ತೋಡಿಕೊಂಡ ಆ ತಾಯಿಗೆ, ಗುರುನಾಥರು ಹೇಗೆ ಸಾಂತ್ವನ ಮಾಡಿದರು.. ಅದನ್ನು ನೋಡಲು, ತಪ್ಪಿದರೆ ನಾವೂ ತಿದ್ದಿಕೊಳ್ಳಲು ಅದು ಸಹಾಯವಾದರೆ ನಮ್ಮ ಶ್ರಮ ಸಾರ್ಥಕ....
ನಿತ್ಯ ಸತ್ಸಂಗ ಇಂತಹ ನೀತಿಯ ಪ್ರತಿಪಾದನೆಗಾಗಿಯೇ ಗುರುನಾಥರು ನಮಗೆ ನೀಡಿರುವುದಲ್ಲವೇ ! ನಾಳೆಯೂ ಬರುವಿರಲ್ಲಾ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment