ಒಟ್ಟು ನೋಟಗಳು

Saturday, May 13, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ - 3


ಶರಣರಕ್ಷಕನೆಂಬ ಬಿರಿದಿಲಿ । ಹರಸಿದನು ದೂರ್ವಾಸಶಾಪವ ।
ಹರಿಯು ಧರೆಗವತರಿಸಿದನು  ಅಧ್ಯಾಯ ಮೂರರಲ್ಲಿ ।। 3 ।।


ಪರಮಾತ್ಮ ನಂಬಿದವರನ್ನು ಎಂದೆಂದೂ ಕಾಯುತ್ತಾನೆಂಬ ವಿಚಾರ ಅಂಬರೀಷನ ಭಕ್ತಿ, ಕರ್ತವ್ಯ ಪರಾಯಣತೆಯಿಂದ ತಿಳಿಯುತ್ತದೆ. ಪರಮ ಭಕ್ತನಾದ ಅಂಬರೀಷನು ಏಕಾದಶಿಯ ವ್ರತಾಚರಣೆಯಲ್ಲಿದ್ದಾಗ ದೂರ್ವಾಸ ಮುನಿಗಳು ಅವನಲ್ಲಿಗೆ ಬರುತ್ತಾರೆ. ರಾಜರು ಅವರನ್ನು ಆದರಿಸಿ, ಪಾರಣೆಗೆ ಬೇಗ ಬರಲು ಕೋರುತ್ತಾನೆ. ಪಾರಣೆಯ ವೇಳೆ ಮುಗಿಯುತ್ತಾ ಬಂದರೂ ಅತಿಥಿಗಳಾದ ದೂರ್ವಾಸರು ಬರದಿದ್ದಾಗ ಹರಿತೀರ್ಥ ಸೇವಿಸಿ ಪಾರಣೆ ಮುಗಿಸುತ್ತಾನೆ, ರಾಜ ಅಂಬರೀಷ. ಇದನ್ನು ತಿಳಿದ ದೂರ್ವಾಸರು 'ನಾನಾ ಯೋನಿಗಳಲ್ಲಿ ನೀನು ಜನಿಸು' ಎಂದು ಅಂಬರೀಷನಿಗೆ ಶಾಪವಿತ್ತಾಗ, ಹರಿಯು ಅದನ್ನು ತಾನು ಪಡೆದು, ರಾಜ ಅಂಬರೀಷನನ್ನು ಮುನಿ ಶಾಪದಿಂದ ರಕ್ಷಿಸಿ, ತಾನು ದಶಾವತಾರಗಳನ್ನು ಎತ್ತುವ ಸುಂದರ ಕಥನವೇ ಮೂರನೆಯ ಅಧ್ಯಾಯ. 


ಮುಂದುವರಿಯುವುದು..... 

No comments:

Post a Comment