ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 14
ಚಾರುಸಾಯಂದೇವ ನಿಂಗಾ । ಕ್ರೂರಯವನನು ತುಚ್ಛಿಸಲಿಕಾ ।
ಘೋರಶಾಸನವಿತ್ತನೈ ಹದಿನಾಲ್ಕರಲಿ ತಿಳಿಯೆ ।। 14 ।।
ಸಾಯಂದೇವನು ಯವನನ ಬಳಿ ಕೆಲಸ ಮಾಡುತ್ತಿದ್ದು ಅದು ಆತನ ಮನಸ್ಸಿಗೆ ನೋವು ತಂದಿತ್ತು. ಈ ಅಸಮಾಧಾನವು ಮನದಲ್ಲಿತ್ತು. ಗುರುಗಳು ಸಾಯಂದೇವನ ಮನೆಗೆ ಬಂದು ಆತನ ಆದರ, ಆತಿಥ್ಯ ಹಾಗೂ ಭಕ್ತಿಗೆ ಮೆಚ್ಚಿ ಯಾವನನ ಸೇವೆಯಿಂದ ಮುಕ್ತಿ ದೊರೆಯುವಂತೆ ಹರಸುತ್ತಾರೆ. ಆ ದಿನ ಕೆಲಸದ ನಿಮಿತ್ತ ಸಾಯಂದೇವನು ಯವನನ ಬಳಿ ಹೋದಾಗ ಯವನನಿಗೆನಿದ್ದೆ ಬಂದಂತಾಗಿ, ನಿದ್ದೆಯಲ್ಲಿ ಆತನನ್ನು ಒಬ್ಬ ಸಾಧುವು ಥಳಿಸುತ್ತಿರುವುದನ್ನು ಕಂಡು ಎಚ್ಚರವಾಗುತ್ತದೆ. ಭಯಭೀತನಾದ ಯವನನು ಸಾಯಂದೇವನಿಗೆ ಅಡ್ಡಬಿದ್ದು "ತನ್ನನ್ನು ರಕ್ಷಿಸಬೇಕೆಂದು" ಬೇಡುತ್ತಾನೆ. ಗುರುಕೃಪೆಯಿಂದ ನಡೆದ ಈ ಘಟನೆಯಿಂದ ಆಶ್ಚರ್ಯಗೊಂಡ ಸಾಯಂದೇವನು ಗುರುವಿನ ಬಳಿ ಬಂದು ಎಲ್ಲವನ್ನೂ ತಿಳಿಸಿ ಅವರ ಸೇವೆಯಲ್ಲಿಯೇ ಉಳಿಯುವ ಚಮತ್ಕಾರಿ ಘಟನೆ ಹದಿನಾಲ್ಕನೇ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು.....
No comments:
Post a Comment