ಗುರುನಾಥ ಗಾನಾಮೃತ
ಅವನಾ ಧೂತನೋ ಇವನೂ
ರಚನೆ: ಅಂಬಾಸುತ
ಅವನಾ ಧೂತನೋ ಇವನೂ
ಅವಧೂತನೋ ಇವನೂ
ಅವನೆಂದರೇ ಪರಮಾತ್ಮನೋ
ಅವನಾ ಧೂತನಿವನು ||
ಎಲ್ಲೆಡೇ ತಾನಿಹನೋ
ಇದ್ದು ಇಲ್ಲದಂತಿಹನೋ
ಗಾಳಿಯಂತೆ ಇವನೋ
ಕಣ್ಣಿಗೆ ಕಾಣದಂತೆ ಇಹನೋ
ಅನುಭವಕೆ ಬರುವನೋ
ಅಂತರಂಗದೊಡೆಯನಿವನೋ ||
ವರ್ಣ ಮೀರಿದವನೋ
ಜಗದ ಬಂಧವಿಲ್ಲದವನೋ
ಕಮಲದೆಲೆಯ ಮೇಲೇ
ನಿಂತಾ ನೀರಿನಂತೆ ಇವನೋ
ಸ್ವಂತವೆಂಬುದಿಲ್ಲದಾ
ಸಂತ ಇವನೆ ಕಾಣೋ ||
ಜಗದ ಪಾಪ ಕಳೆಯೇ
ಜನ್ಮ ತಾಳಿದವನೂ
ಜನನ ಮರಣ ಮೀರೀ
ನಿಂತ ಜ್ಯೋತಿ ರೂಪನಿವನೋ
ಎಣಿಕೆಗೆ ಸಿಗದವನೋ ಅವನೂ
ಕುಣಿಕೆಯ ಬಿಡಿಸುವವನೋ||
ಸಖರಾಯಪುರದೊಳಗೇ ಇಹನೋ
ವರ್ಣಿಸಲಸದಳನೋ
ಶ್ರೀವೇಂಕಟಾಚಲನೆಂಬಾ
ನಾಮ ಧರಿಸಿ ಇಹನೋ
ಅರಿವಿನಾ ಅರಿವಿವನೋ
ಅಂಬಾಸುತನಾ ಪೊರೆದಿಹನೋ ||
No comments:
Post a Comment