ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 11
ಪೊಡವಿಯಲಿ ಕರಂಜ ಪುರದಲಿ । ಮಡದಿಯಂಬಾಬಾಯಿಯುದರದೋ ।
ಳೊಡನೆ ಬಂದನು ನರಹರಿಯು ಹನ್ನೊಂದರಲಿ ನೋಡು ।। 11 ।।
ಅಂಬಿಕೆಯು ಗುರುವಿನಾಜ್ಞೆಯಂತೆ ಶನಿ ಪ್ರದೋಷವಾಚರಿಸಿದ, ಫಲದಿಂದ ಮುಂದೆ ಕರಂಜನಗರದಲ್ಲಿ ಅಂಬಾಬಾಯಿ ಎಂಬ ಹೆಸರಿನಿಂದ ಜನಿಸುತ್ತಾಳೆ. ಮಾಧವನೆಂಬ ಸುಯೋಗ್ಯನೊಂದಿಗೆ ಆಕೆಯ ವಿವಾಹವಾಗಿ "ನರಹರಿ" ಎಂಬ ಹೆಸರಿನ ಮಗುವು ಜನಿಸುತ್ತದೆ. ಕಾರಣಿಕ ಪುರುಷರಾದ ಶ್ರೀಪಾದ ಶ್ರೀವಲ್ಲಭರ ಎರಡನೆಯ ಅವತಾರವಾದ ಈ ಮಗು ಬಾಲ್ಯದಲ್ಲೇ ಅನೇಕ ಅದ್ಭುತಗಳನ್ನು ಸೃಷ್ಟಿಸುತ್ತದೆ. ಏಳು ವರ್ಷಗಳಾದರೂ ಮಾತನಾಡದ ಮಗುವನ್ನು ಕಂಡು ತಂದೆ ತಾಯಿಗಳು ಚಿಂತೆಗೀಡಾದಾಗ ನರಹರಿಯು ತನಗೆ ಉಪನಯನ ಮಾಡಿರೆಂದು ಸಂಜ್ಞೆ ಮಾಡುತ್ತಾನೆ. ಮೂಕ ಬಾಲಕನಿಗೆ ಉಪನಯನದ ವಿಚಾರ ತಿಳಿದು ಜನ ನಗೆಯಾಡುತ್ತಾರೆ. ಕೆಲವರು ಮತ್ತೇನು ವಿಚಿತ್ರ ಜರುಗುವುದೋ ನೋಡೋಣವೆನ್ನುತ್ತಾರೆ. ಉಪನಯನವಾದ ಕೂಡಲೇ ನರಹರಿಯು ನಾಲ್ಕು ವೇದಗಳನ್ನು ಹೇಳುತ್ತಾ ಜನರನ್ನು ಅಚ್ಚರಿಪಡಿಸುವ, ತಾನು ಕಾರಣಿಕ ಪುರುಷನೆಂದು ತೋರಿಸುವುದೇ ಹನ್ನೊಂದನೆಯ ಅಧ್ಯಾಯ.
ಮುಂದುವರಿಯುವುದು.....
No comments:
Post a Comment