ಒಟ್ಟು ನೋಟಗಳು

Tuesday, May 16, 2017

ಶ್ರೀ ಸದ್ಗುರುನಾಥ ಲೀಲಾಮೃತ - ಭಾಗ 3 ನಿತ್ಯ ಸತ್ಸಂಗ ಗ್ರಂಥದ ಲೋಕಾರ್ಪಣೆ ಸಮಾರಂಭ 


ಶ್ರೀ ಅವಧೂತ ಪ್ರಕಾಶನ "ಭಗವಾನ್ ಕುಟೀರ", ಡಾ.ಸಿ.ಎಲ್.ರಾಮಣ್ಣ ರಸ್ತೆ, ಶಿವಮೊಗ್ಗ - 577 202 ಇವರಿಂದ ಪ್ರಕಾಶನಗೊಂಡು ಪ್ರಖ್ಯಾತ ಲೇಖಕ ಶ್ರೀ.ಎಸ್.ದತ್ತಾತ್ರಿ (ಭಗವಾನ್) ಅವರ ಲೇಖನಿಯ ಮೂಸೆಯಿಂದ ಹೊರಬಂದ "ಶ್ರೀ ಸದ್ಗುರುನಾಥ ಲೀಲಾಮೃತ - ಭಾಗ 3 ನಿತ್ಯ ಸತ್ಸಂಗ " ಗ್ರಂಥವು ಇದೇ  ತಿಂಗಳ 19ನೇ ಮೇ 2017, ಶುಕ್ರವಾರ ದಂದು ಮೈಸೂರಿನ ವಿ.ವಿ.ಮೊಹಲ್ಲಾ, ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಶ್ರೀ.ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ಅವರ 19ನೇ ವರ್ಷದ ಅನುಗ್ರಹ ಮಹೋತ್ಸವ ಕಾರ್ಯಕ್ರಮದಲ್ಲಿ  ಲೋಕಾರ್ಪಣೆಗೊಳ್ಳಲಿದೆ. 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗುರು  ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 




ಈ ಗ್ರಂಥವು ಸಖರಾಯಪಟ್ಟಣದ ಅವಧೂತರಾದ ಶ್ರೀ.ವೆಂಕಟಾಚಲ ಅವಧೂತರು ನಡೆಸಿದ ಲೀಲೆಗಳನ್ನು ಕುರಿತ 81 ಅಧ್ಯಾಯಗಳನ್ನು ಒಳಗೊಂಡಿರುತ್ತದೆ. ಆಸಕ್ತ ಗುರು ಬಂಧುಗಳು ಗ್ರಂಥದ ಪ್ರತಿಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:

ಶ್ರೀ.ಎಸ್.ದತ್ತಾತ್ರಿ (ಭಗವಾನ್)ಶ್ರೀ ಅವಧೂತ ಪ್ರಕಾಶನ, "ಭಗವಾನ್ ಕುಟೀರ", ಡಾ.ಸಿ.ಎಲ್.ರಾಮಣ್ಣ ರಸ್ತೆ, ಶಿವಮೊಗ್ಗ - 577 202ದೂರವಾಣಿ ಸಂಖ್ಯೆ: 94482 53533

No comments:

Post a Comment