ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ -17
ಕಿರುಮತಿಯ ಬ್ರಾಹ್ಮಣನು ಭುವನೇಶ್ವರಿಗೆ ಜಿಹ್ವೆಯ ಛೇಡಿಸಲು ಭೂ ।
ಸುರಗಿತ್ತನು ಜ್ಞಾನ ಹದಿನೇಳರಲಿ ಶ್ರೀಗುರುವು ।। 17 ।।
ಕರವೀರಪುರದಲ್ಲಿ ಒಬ್ಬ ವೇದಶಾಸ್ತ್ರ ಪಂಡಿತ ಬ್ರಾಹ್ಮಣನಿದ್ದನು. ಆತನಿಗೆ ಅತ್ಯಂತ ಮಂದಮತಿಯಾದ ಮಗನಿದ್ದನು. ತಂದೆಯ ಮರಣವಾಗಲು, ಊರ ಜನಗಳು 'ಬುದ್ಧಿವಿದ್ಯೆ ಇಲ್ಲದ ನೀನು ಪಶುವಿಗೆ ಸಮಾನ. ಎಂತಹ ಪಂಡಿತರ ಮಗನಾದ ನೀನು ಅದೆಂತಹ ದಡ್ಡನಾಗಿದ್ದೀ' ಎಂದು ಅಪಹಾಸ್ಯ ಮಾಡುತ್ತಾರೆ. ಏನೂ ಅರಿಯದ ಆ ಮೂಢ, ಕೊನೆಗೆ ಔದುಂಬರದ ಆಚೆ ಇರುವ ಭುವನೇಶ್ವರಿಯ ದೇವಾಲಯಕ್ಕೆ ಬಂದು ಪರಿಪರಿಯಾಗಿ ದೇವಿಯಲ್ಲಿ ಬೇಡುತ್ತಾನೆ. ಮೂರು ದಿನ ದೇವಿಯ ಮುಂದೆ ಉಪವಾಸ ಕುಳಿತು ಕೊನೆಗೆ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸುತ್ತಾನೆ. ದೇವಿಯು ಬಾಲಕನ ಸ್ಥಿರತೆ, ಭಕ್ತಿಯನ್ನು ಕಂಡು ಪ್ರತ್ಯಕ್ಷಳಾಗಿ 'ಕೃಷ್ಣಾ ನದಿಯ ಆಚೆ ದಂಡೆಯ ಔದುಂಬರದ ಕೆಳಗಿರುವ ನರಸಿಂಹ ಸರಸ್ವತಿಗಳಿಗೆ ಮೊರೆ ಹೋಗು, ನಿನ್ನ ಉದ್ಧಾರವಾಗುತ್ತದೆ' ಎಂದು ಆಜ್ಞಾಪಿಸುತ್ತಾಳೆ. ವೈಜನಾಥದಿಂದ ಔದುಂಬರದ ಕ್ಷೇತ್ರಕ್ಕೆ ಬಂದು ನೆಲೆಸಿದ ಗುರುಗಳ ಬಳಿ ಬಂದು ಸೇವೆ ಮಾಡಿದ ಆ ಅಜ್ಞಾನಿ ಬಾಲಕನನ್ನು ಗುರುಗಳು ಹರಸಿ, ಆತನ ನಾಲಿಗೆಯನ್ನು ಬರಿಸಿ, ಮಹಾಜ್ಞಾನಿಯನ್ನಾಗಿಸುವ - ಗುರುಮಹಿಮೆ ಹದಿನೇಳನೆಯ ಅಧ್ಯಾಯವಾಗಿದೆ.
ಮುಂದುವರಿಯುವುದು...
No comments:
Post a Comment