ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 4
ಸತ್ಯವನು ಪರೀಕ್ಷಿಸಲು ಬಂದು । ಶಿಶುತ್ವ ಪಡೆದರು ಬ್ರಹ್ಮಮೊದಲಾ ।
ವಿಶ್ವಪಾಲರು ಬಟ್ಟೆಗೆಟ್ಟರು ನಾಲ್ಕರಲ್ಲಿ ತಿಳಿಯೆ ।। 4 ।।
ಮಹಾಪತಿವ್ರತೆಯಾದ, ಅತ್ರಿಮುನಿಗಳ ಪತ್ನಿಯಾದ ಅನಸೂಯಾ ಮಾತೆಯ ನೇಮ, ನಿಷ್ಠೆ ಜಗತ್ಪ್ರಸಿದ್ಧವಾದುದು. ಅನಸೂಯೆಯು ತನ್ನ ಶಕ್ತಿಯಿಂದ ದೇವಲೋಕವನ್ನು ಗಳಿಸಿಬಿಟ್ಟರೆ ತಮಗೆಲ್ಲಿ ಸ್ಥಾನವಿರದೆಂದು, ಹೇಗಾದರೂ ಮಾಡಿ ಅವಳ ವ್ರತ ಭಂಗ ಮಾಡಬೇಕೆಂದು - ದೇವತೆಗಳೆಲ್ಲಾ ಸೇರಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರನ್ನು ಬೇಡುತ್ತಾರೆ. ಆಗ ಈ ಮೂವರೂ ಅತ್ರಿ ಮುನಿಗಳಿಲ್ಲದ ವೇಳೆಯಲ್ಲಿ ಆಶ್ರಮಕ್ಕೆ ಬಂದು ಅತಿಥಿಗಳಿಗೆ ಇಚ್ಛಾ ಭೋಜನ ಕೊಡಬೇಕೆಂದು ಕೋರುತ್ತಾರೆ. ಈ ಮೂವರೂ ಕಪಟವೇಷಧಾರಿಗಳ ಬೇಡಿಕೆಯನ್ನು ಕೇಳಿದ ಅನಸೂಯಾಮಾತಾ, ಇವರು ತನ್ನ ಮಕ್ಕಳೆಂದು ಭಾವಿಸುತ್ತಾಳೆ. ಆ ಕೂಡಲೇ ತ್ರಿಮೂರ್ತಿಗಳೂ ಎಳೆ ಕೂಸುಗಳಾಗಿಬಿಡುತ್ತಾರೆ. ಹೀಗೆ ಅವರಿಗೆ ಹಾಲುಡಿಸಿ ತ್ರಿಮೂರ್ತಿಗಳ ತಾಯಿಯಾಗುವ ಅನಸೂಯಾ, ಮುಂದೆ ತ್ರಿಮೂರ್ತಿ ಸ್ವರೂಪರಾದ ದತ್ತಾತ್ರೇಯರ ಅವತಾರಕ್ಕೆ ಕಾರಣಳಾಗುವ ಸುಂದ ಕಥಾನಕವು ನಾಲ್ಕನೆಯ ಅಧ್ಯಾಯದಲ್ಲಿ ಬರುತ್ತದೆ. ಇವೆಲ್ಲವನ್ನೂ ಪರಮ ಜ್ಞಾನಿಗಳಾದ ಅತ್ರಿ ಮುನಿಗಳು ಮನದಲ್ಲಿಯೇ ಕಂಡು ಹರ್ಷಿಸುತ್ತಾರೆ.
ಮುಂದುವರಿಯುವುದು.....
No comments:
Post a Comment