ಒಟ್ಟು ನೋಟಗಳು

Friday, May 19, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ - 9


ಕ್ಷೋಣಿ ಪತಿಯವನರಲಿ ಜನಿಸುವಿ । ನೀನೆನುತ ರಜಕನಿಗೆ ವರವನು ।
ಸಾನುರಾಗದಿ ಕೊಟ್ಟನೈ  ಗುರು ನವಮ ಪ್ರಕರಣದಿ ।। 9 ।।

ಶ್ರೀ ಗುರುವು ಕುರುವಪುರದಲ್ಲಿರುವಾಗ, ಅನೇಕಾನೇಕ ಭಕ್ತರು ಬಂದು ತಮ್ಮ ತಮ್ಮ ರೀತಿಯಲ್ಲಿ ಸೇವೆಯನ್ನು ಮಾಡುತ್ತಿರುತ್ತಾರೆ. ಅವರಲ್ಲಿ ಒಬ್ಬ ಅಗಸ. ಆತನು ಭಕ್ತಿಯಿಂದ ಗುರುಸೇವೆಯಲ್ಲಿ ನಿರತನಾಗಿದ್ದನು. ಒಮ್ಮೆ ಅಗಸನು ನದಿಯಲ್ಲಿ ಬಟ್ಟೆ ಒಗೆಯುವಾಗ ಮ್ಲೇಚ್ಛ ರಾಜನು ತನ್ನ ಪರಿವಾರದೊಂದಿಗೆ ಜಲಕ್ರೀಡೆಯಾಡುವ ವೈಭವವನ್ನು ಕಂಡು ಬೆರಗಾಗುತ್ತಾನೆ. ಎಂದಿನಂತೆ ಅಗಸನು ತನ್ನ ಕೆಲಸ ಮುಗಿಸಿ ಬಂದು, ಭಕ್ತಿಯಿಂದ ಗುರುವಿಗೆ ನಮಿಸಿದಾಗ, ಗುರುಗಳು "ಏನಪ್ಪಾ, ನಿನ್ನ ಮನದ ಆಸೆ ರಾಜನಾಗಬೇಕೆಂದು ತಾನೇ?" ಎಂದು ಪ್ರಶ್ನಿಸುತ್ತಾರೆ. "ಮುಂದಿನ ಜನ್ಮದಲ್ಲಿ ನೀನು ರಾಜನಾಗುತ್ತೀಯೆ" ಎಂದು ಆಶೀರ್ವದಿಸುತ್ತಾರೆ. ಆದರೆ ರಜಕನು "ತಾನು ರಾಜನಾದರೂ ನಿಮ್ಮ ದರ್ಶನ ಸಾಮೀಪ್ಯವನ್ನು ನನಗೆ ದಯಪಾಲಿಸಬೇಕು" ಎಂದು ಬೇಡುವ ವಿಚಾರಗಳು ಒಂಬತ್ತನೆಯ ಅಧ್ಯಾಯದಲ್ಲಿ ಬರುತ್ತವೆ. 

ಮುಂದುವರಿಯುವುದು.....

No comments:

Post a Comment