ಒಟ್ಟು ನೋಟಗಳು

Wednesday, May 10, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 


ಜಗತ್ ಪ್ರಸಿದ್ಧವಾದ ಗುರುಚರಿತ್ರೆಯು ಭಾವಸಾಗರ ತಾರಣ ನೌಕೆಯಾಗಿದೆ. ಸಿದ್ಧಮುನಿಗಳು ನಾಮಧಾರಕನಿಗೆ ಇದನ್ನು ತಿಳಿಸುತ್ತಾರೆ. ನಾಮಧಾರಕನ ಮೂಲಕ ಜಗತ್ತಿಗೆ ದೊರೆತ ಇದರ ಫಲವೆಷ್ಟೆಂದರೆ, ಇದು ಭವರೋಗ ನಿವಾರಕ ಅಮೃತ. 52 ಅಧ್ಯಾಯಗಳ ಈ ಚರಿತ್ರೆಯನ್ನು ತಿಳಿದ ನಂತರ ನಾಮಧಾರಕನು ಇದರ ಸಾರಾಧ್ಯಾಯವನ್ನು ತಿಳಿಸಬೇಕೆಂದು ಕೇಳುತ್ತಾ "ಗುರುವೇ ಪರಿಪರಿಯ ದಿವ್ಯ ಔಷಧಗಳ ಸಾರವನ್ನು ಸೇರಿಸಿ ತ್ರೈಲೋಕ್ಯ ಚಿಂತಾಮಣಿ ರಸಾಯನವನ್ನು ಪಂಡಿತರು ಸಿದ್ಧಪಡಿಸುವಂತೆ ಗುರುಚರಿತ್ರೆಯ ಸಾರರೂಪವನ್ನು ಸಂಗ್ರಹವಾಗಿ ಮತ್ತೊಮ್ಮೆ ತಿಳಿಸಿ. ಏಕೆಂದರೆ, ಈ ಅಮೃತೋಪಮ ಚರಿತ್ರೆಯನ್ನು ಕೇಳಿದಷ್ಟೂ ಮನದಣಿಯದು" ಎಂದು ಸಿದ್ಧಮುನಿಯ ಚರಣಕ್ಕೆ ನಮಿಸಿದಾಗ, "ಭಕ್ತಶ್ರೇಷ್ಠ ನಾಮಧಾರಕನೇ..... ನಿನಗಾಗಿ ಅವತರಣಿಕೆಗಳೆಲ್ಲವನ್ನೂ ತಿಳಿಸುತ್ತೇನೆ" ಎಂದು ಹೀಗೆ ಹೇಳತೊಡಗುತ್ತಾರೆ. 

ಮುಂದುವರಿಯುವುದು..... 



No comments:

Post a Comment