ಒಟ್ಟು ನೋಟಗಳು

Friday, May 26, 2017

ಗುರುನಾಥ ಗಾನಾಮೃತ 

ಕಾಮ ಕ್ರೋಧ ಗೆಲ್ಲಲಿಲ್ಲಾ ಎಂದು ನೀನು ಹೇಳಬೇಡಾ
ರಚನೆ: ಅಂಬಾಸುತ 


ಕಾಮ ಕ್ರೋಧ ಗೆಲ್ಲಲಿಲ್ಲಾ ಎಂದು ನೀನು ಹೇಳಬೇಡಾ
ಗೆಲ್ಲಿಸುವವನವನಿದ್ದಾನೆ ಗೆದ್ದೇ ಗೆಲ್ಲಿಸುತ್ತಾನೆ||


ನಿನ್ನಿಚ್ಚೆ ಎಂದೂ ನೆಡೆಯದೂ
ಅವನಿಚ್ಚೆ ನೆಡೆಯದೇ ಬಿಡದೂ
ಬಂದಿದ್ದೆಲ್ಲಾ ಬರುತಾ ಇರಲೀ
ಅವನ ಕೃಪೆ ಒಂದಿರಲೀ ||


ಅವನ ಮಾತಿನಲ್ಲೀ ನಂಬಿಕೆ
ಇರಲಿ ಸದಾ ಅದೇ ಶ್ರೀ ರಕ್ಷೆ
ಕೊಡನು ಅವನು ಎಂದಿಗೂ ಶಿಕ್ಷೆ
ಬೇಡುತಿರು ಅವನಲಿ ಭಿಕ್ಷೆ ||


ಗುರು ಎಂದರೇ ಹೀಗೇ
ಬಿಟ್ಟು ಎಳೆದುಕೊಳ್ಳುತಾನೇ
ಸೋಲಿಸನೂ ಅವನೂ ನಿನ್ನಾ
ಸದಾ ಕಾಯ್ವ ಮರೆಯದಿರೂ ಅವನಾ ||

No comments:

Post a Comment