ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 15
ಧಾರಣಿಯೊಳಿಹ ತೀರ್ಥಗಳಿಗಾ - । ಚಾರಕೋಸುಗ ಕಳುಹಿಶಿಷ್ಯರ ।
ಭಾರಿಗುಪ್ತದೊಳಿದ್ದನೈ ಹದಿನೈದರಲಿ ಗುರುವು ।। 15 ।।
ಶ್ರೀಗುರುಗಳು ತಮ್ಮ ಶಿಷ್ಯರನ್ನೆಲ್ಲಾ ಕರೆದು ಹೀಗೆನ್ನುತ್ತಾರೆ. 'ಕಾಳಿ ಪ್ರಭಾವ ಅಧಿಕವಾಗುತ್ತಿದೆ. ನಮ್ಮ ಬಳಿ ಆಸೆ, ಆಮಿಷಗಳನ್ನು ಪೂರೈಸಿಕೊಳ್ಳಲು ಬರುವ ಜನರು ಅಧಿಕವಾಗುತ್ತಿದ್ದಾರೆ. ಎಲ್ಲರ ಇಚ್ಚೆ ಪೂರೈಸುವುದು ದುಸ್ತರ. ಸಾಧನೆಗೂ ಕಷ್ಟ - ಹೀಗಾಗಿ ಕೆಲವೊಂದು ಸಮಯ ನಾನು ಗುಪ್ತವಾಗಿ ವೈಜನಾಥದಲ್ಲಿರುತ್ತೇನೆ. ನೀವೆಲ್ಲ ವಿವಿಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಮತ್ತೆ ಶ್ರೀಶೈಲಕ್ಕೆ ಬನ್ನಿ. ಅಲ್ಲಿ ನಿಮಗೆ ದರ್ಶನವೀಯುತ್ತೇನೆ' ಎಂದು ಹೇಳಿ ಕಳುಹಿಸುವ ಪ್ರಸಂಗ - ಹದಿನೈದನೆಯ ಅಧ್ಯಾಯ.
ಮುಂದುವರಿಯುವುದು.....
No comments:
Post a Comment