ಒಟ್ಟು ನೋಟಗಳು

Friday, May 26, 2017

ಗುರುನಾಥ ಗಾನಾಮೃತ 

ಬಿಟ್ಟುಹೋಗೆನಯ್ಯಾ ಗುರುವೇ ನಾ ನಿನ್ನಾ 
ರಚನೆ: ಅಂಬಾಸುತ 


ಬಿಟ್ಟುಹೋಗೆನಯ್ಯಾ ಗುರುವೇ ನಾ ನಿನ್ನಾ 
ಕಷ್ಟವಾದರೂ ಸರಿಯೇ ಇಷ್ಟದಿಂ ನಿನ್ನ ನೆನೆವೇ  ।। ಪ ।।



ಬಚ್ಚಿಟ್ಟುಕೊಳ್ಳುವೆ ನಿನ್ನ ಬೆಚ್ಚಗೆ ಮನದೊಳಗೇ 
ಹಚ್ಚಿ ಭಕ್ತಿಯ ನಂದಾ ದೀಪವಾ  ||

ಆರು ಅರಿಗಳೂ ನಿನ್ನಾ ದೂರಿದರೂ 
ಅರಿವಿನಾ ಅರಿವೇ ಗುರುವೇ ನಾ ನಿನ್ನಾ ।। 

ಹಿರಿ ಹೆಸರೂ ಬರಲೀ ಸಿರಿನಿಧಿಯೂ ಸಿಗಲೀ 
ಮನವಾ ಚಂಚಲಗೊಳಿಸೋ ಮನದನ್ನೇ ಬಂದರೂ ।।

ಅನ್ನ ನೀರು ವಸ್ತ್ರ ಸಿಗದೇ ಇರಲೀ 
ಅನುದಿನ ಅವಮಾನ ಅಪಮಾನವಿರಲೀ ।।

ಅಂಬಾಸುತನಾ ಅಂತರಂಗದಾ ಒಡೆಯನೇ 
ಸಖಾರಾಯಪುರದಾ ಸದ್ಗುರುನಾಥನೇ ।। 




No comments:

Post a Comment