ಗುರುನಾಥ ಗಾನಾಮೃತ
ಅರಿವಿನಾಲಯಕೇ ಕರೆದೊಯ್ಯೊ ಗುರುವೇ
ರಚನೆ: ಅಂಬಾಸುತ
ಅರಿವಿನಾಲಯಕೇ ಕರೆದೊಯ್ಯೊ ಗುರುವೇ
ಆತ್ಮನಿವೇದನೇ ನಾ ಮಾಡಿಕೊಳ್ಳುವೇ ||ಪ||
ಗ್ನಾನವೆಂಬುದೆನಗಿಲ್ಲಾ ನಿಜಭಕ್ತಿ ಅರಿತಿಲ್ಲಾ
ಮುಕ್ತಿ ಎಂಬುವಾ ಪದವ ಕೇಳಿಯೂ ಇಲ್ಲಾ
ಆಸೆ ನಿರಾಸೆಗಳಾ ಬಣ್ಣಬಣ್ಣದಾ ಬದುಕಲೀ
ನಾಟಕವನಾಡುತಾ ಕಾಲ ಕಳೆಯುತಿಹೆನಲ್ಲಾ ||1||
ತಾಮಸಿಗ ನಾನಾಗೀ ತತ್ವಗಳ ದೂರಿರಿಸೀ
ಗುರು ನಿನ್ನ ಅರಿತದೇ ಹೋದೇ ಕುರುಡಾಗಿ ನಿಂತೇ
ಮತಿ ಗತಿ ಇಲ್ಲದೇ ಅತೀ ದೀನನಾಗಿಹೆನೋ
ಮಮತೆಯ ತೋರುತಾ ಸನ್ಮತಿಯ ನೀಡೋ ||2||
ಕ್ಷಮಿಸಯ್ಯ ನಾ ಮಾಡಿದಾ ಅಪಕೃತಿಯಾ
ಮರೆಯಲಾರೆನೋ ನೀ ಮಾಡುವಾ ಉಪಕೃತಿಯಾ
ಸಖರಾಯಪುರವಾಸೀ ಹೇ ಸದ್ಗುರುನಾಥಾ
ಅಂಬಾಸುತನಾ ಅರಿವಿನಾಲಯದೊಳಗೊಯ್ಯೋ ||3||
No comments:
Post a Comment