ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 8
ಪ್ರಾಣ ತ್ಯಜಿಸಲು ನದಿಗೆ ಬಂದ । ಮಾನಿನಿಗೆ ಜಡಸುತಗೆ ಪ್ರೇಮದಿ ।
ಜ್ಞಾನವಿತ್ತನು ಗುರುವು ಕೇಳೆಂಟನೆಯ ಪ್ರಕರಣದಿ ।। 8 ।।
ಕುರುವಪುರದ ಅಂಬಿಕೆ ಎಂಬ ವಿಧವೆ, ತನ್ನ ಶತದಡ್ಡ ಮಗನ ಕಾರಣದಿಂದ ಪ್ರಾಣ ತ್ಯಜಿಸಲು ಕೃಷ್ಣಾ ನದಿಗೆ ಬರುತ್ತಾಳೆ. ಅಲ್ಲಿ ಶ್ರೀಪಾದ ಶ್ರೀವಲ್ಲಭರು ಕುಳಿತಿರುವುದನ್ನು ಕಂಡು, ಗುರುವಿಗೆ ನಮಿಸಲು ಬಂದು, ತನ್ನ ವಿಷಯವನ್ನು ಹೇಳಿಕೊಳ್ಳುತ್ತಾಳೆ. ಗುರು ಕೃಪಾಕಟಾಕ್ಷದಿಂದ ಆ ಮೂರ್ಖ ಹುಡುಗನು ತ್ರಿವೇದ ಪಂಡಿತನಾಗುತ್ತಾನೆ.
ಗುರುಗಳ ಕರುಣೆಯಿಂದ ಶನಿಪ್ರದೋಷ ವ್ರತದ ವಿಚಾರವನ್ನು ಆಕೆಗೆ ತಿಳಿಸಿ ಈ ವ್ರತ ಮಾಡಿ ಚಂದ್ರಸೇನನೆಂಬ ರಾಜ ಹೇಗೆ ಅಷ್ಟೈಶ್ವರ್ಯ ಪಡೆದನೆಂಬ ವಿಚಾರವನ್ನು ಹೇಳಿ, ನೀನು ಶನಿಪ್ರದೋಷ ವ್ರತವನ್ನಾಚರಿಸಿ ಸುಖ ಸಂಪತ್ತುಗಳನ್ನು ಗಳಿಸೆಂದು ಆಶೀರ್ವದಿಸುತ್ತಾರೆ. ಗುರುಕೃಪೆಯಿಂದ ಏನೆಲ್ಲಾ ಸಾಧ್ಯವೆಂಬುದು ಈ ಎಂಟನೆಯ ಅಧ್ಯಾಯದಲ್ಲಿ ಕಂಡುಬರುತ್ತದೆ.
ಮುಂದುವರಿಯುವುದು.....
No comments:
Post a Comment