ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 6
ಆರನೆಯ ಅಧ್ಯಾಯದಲಿ ಸುರ ವೈರಿ ರಾವಣನಿಂದ ಲಿಂಗವ ।
ಹಾರಿಸುತ ಗೋಕರ್ಣದಲಿ ಸ್ಥಾಪಿಸಿದನಾ ಗಣಪ ।। 6 ।।
ಮಹಾಭಕ್ತನೂ, ಶಕ್ತನೂ ಆದ ರಾವಣಾಸುರನ ತಾಯಿ ಕೈಕೇಯಿ ಪ್ರತಿನಿತ್ಯ ಶಿವನ ಮಣ್ಣಿನ ಲಿಂಗವನ್ನು ಭಕ್ತಿಯಿಂದ ಪೂಜಿಸುತ್ತಿದ್ದಳು. ತನ್ನ ಘನತೆಗಿದು ಸರಿಯಿಲ್ಲವೆಂದು ತಿಳಿದ ರಾವಣನು "ಅಮ್ಮಾ, ಈ ಮಣ್ಣಿನ ಲಿಂಗವೇಕೆ, ಶಿವನ ಆತ್ಮಲಿಂಗವನ್ನೇ, ಕೈಲಾಸವನ್ನೇ ನಿನಗೆ ತಂದುಕೊಡುತ್ತೇನೆ" ಎಂದು ಹೇಳಿ ಕೈಲಾಸ ಪರ್ವತವನ್ನೇ ಎತ್ತಿ ತರಲು ಪ್ರಯತ್ನಿಸುತ್ತ, ಕೈಲಾಸದಡಿಯಲ್ಲಿ ಸಿಕ್ಕಿ ಬೀಳುತ್ತಾನೆ. ಆದರೂ ಬಗ್ಗದ ಆತ ತನ್ನ ನರಗಳನ್ನೇ ತಂತಿ ಮಾಡಿ ಸಾಮಗಾನದಲ್ಲಿ ಶಿವನನ್ನು ಸ್ತುತಿಸಿದಾಗ, ಶಂಕರನು ಪ್ರತ್ಯಕ್ಷನಾಗಿ ಆತನ ಬೇಡಿಕೆಯಂತೆ ಆತ್ಮಲಿಂಗವನ್ನೇ ಕೊಟ್ಟುಬಿಡುತ್ತಾನೆ. ಭಕ್ತಾಪರಾಧೀನನಾದ ಭೋಳೆ ಶಂಕರನ ಈ ವರದಿಂದ ಮುಂದಾಗುವ ಅನಾಹುತವನ್ನರಿತ ದೇವತೆಗಳು - ಗಣಪತಿಯ ಸಹಕಾರದಿಂದ ಆತ್ಮಲಿಂಗವು ಭೂಸ್ಪರ್ಶವಾಗುವಂತೆ ಮಾಡುತ್ತಾರೆ. ಮುಂದೆ ಅದನ್ನು ಕಿತ್ತೊಯ್ಯಲು ರಾವಣ ಶತಪ್ರಯತ್ನ ಮಾಡಿದರೂ ವಿಫಲನಾಗುವ, ಗೋಕರ್ಣ ರೂಪ ಪಡೆದು ಲೋಕದಲ್ಲಿ ಗೋಕರ್ಣವೆಂದು ಪ್ರಖ್ಯಾತವಾದ ಕ್ಷೇತ್ರದ ವಿಚಾರಗಳು ಆರನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು.....
No comments:
Post a Comment