ಒಟ್ಟು ನೋಟಗಳು

Friday, May 12, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ - 2


ಸರಸಿಜಾಸನನೆಂತು ಜನಿಸಿದ । ಪರಿಪರಿಯ ಯುಗಧರ್ಮಕಥನವು ।
ಶರಣ ಸಂದೀಪಕನ ಕಥೆಯಧ್ಯಾಯವೆರಡರಲಿ ।। 2 ।।


ಗುರುಶಿಷ್ಯರ ಸಮ್ಮಿಲನವಾದ ನಂತರ, ನಾಮಧಾರಕನಿಗಾಗಿ ಸಿದ್ಧಯೋಗಿಯು, ಈ ಬ್ರಹ್ಮಾಂಡವನ್ನೆಲ್ಲಾ ಬ್ರಹ್ಮನು ಹೇಗೆ ಸೃಷ್ಟಿಸಿದನೆಂಬ ವಿಚಾರವನ್ನು ತಿಳಿಸುತ್ತಾರೆ. ಗುರುಸೇವೆ, ಭಕ್ತಿ ಎಂಬುದು ಅದೆಷ್ಟು ಕಠಿಣ, ಅದೆಂತಹ ಮಹಾಸಾಧನೆ, ಇದರ ಮುಂದೆ ಹರಿಹರ ಬ್ರಹ್ಮಾದಿಗಳೂ ತಲೆಬಾಗುತ್ತಾರೆ ಎಂಬ ವಿಚಾರವನ್ನು ತಿಳಿಸಲು ಗೋದಾವರೀ ತೀರದಲ್ಲಿದ್ದ ಆಂಗೀರಸ ಮುನಿಯ ಕಥೆಯನ್ನು ಎರಡನೆಯ ಅಧ್ಯಾಯದಲ್ಲಿ ತಿಳಿಸುತ್ತಾರೆ. 

ಗುರುವು ತನ್ನ ಶಿಷ್ಯರನ್ನು ಪರೀಕ್ಷಿಸಲು ಹೀಗೊಂದು ನಾಟಕವಾಡುತ್ತಾನೆ. "ನೋಡಿ, ನನಗೆ ಸಹಿಸಲಸಾಧ್ಯವಾದ ಕುಷ್ಟರೋಗ ಬಂದು ಮೈಯೆಲ್ಲಾ ದುರ್ಗಂಧದಿಂದ ಕೂಡಿದ ಖಾಯಿಲೆ ಬರುತ್ತದೆ. ಆಗ ನಿಮ್ಮಲ್ಲಿ ಯಾರು ನನ್ನ ಸೇವೆ ಮಾಡುತ್ತೀರಿ?" ಎಂದಾಗ ಎಲ್ಲರೂ ಹಿಂಜರಿಯುತ್ತಾರೆ. ಆದರೆ ದೀಪಕನೆಂಬ ಶಿಷ್ಯನು ಗುರುಸೇವೆಗೆ ನಿಂತು ಗುರುವಿನ ಎಲ್ಲಾ ಶಿಕ್ಷೆಗಳನ್ನೂ, ಉಪಟಳಗಳನ್ನೂ ಸಹಿಸಿಕೊಂಡು ಅನನ್ಯವಾಗಿ ಸೇವೆ ಮಾಡುತ್ತಾನೆ. ಇವನ ಸೇವಾತತ್ಪರತೆಯನ್ನು ಕಂಡು ಹರಿಹರಬ್ರಹ್ಮರು "ವರ ಬೇಡಿಕೋ" ಎಂದಾಗ  "ನಿರಂತರ ನನ್ನ ಮನದಲ್ಲಿ ಗುರುಸೇವಾ ಭಾವವಿರುವಂತೆ ಅನುಗ್ರಹಿಸಿ, ಮತ್ತೇನೂ ಬೇಡ" ಎನ್ನುತ್ತಾನೆ. ಹೀಗೆ ಎರಡನೆಯ ಅಧ್ಯಾಯದಲ್ಲಿ ಗುರುಸೇವಾ ಮಹಿಮೆಯ ವರ್ಣನೆ ಬರುತ್ತದೆ. 


ಮುಂದುವರಿಯುವುದು..... 

No comments:

Post a Comment