ಒಟ್ಟು ನೋಟಗಳು

Saturday, May 20, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ - 10


ತುಡುಗಾರ ಶ್ರೀಪಾದ ಯಾತ್ರೆಗೆ । ನಡೆಯುತಿಹ ವಿಪ್ರನನು ಕೊಂದರು ।
ವೊಡನೆ ಶ್ರೀಗುರು ಬದುಕಿಸಿದನೈ ಹತ್ತನಧ್ಯಾಯ ।। 10 ।।

ವಲ್ಲಭೇಷನೆಂಬ ಬ್ರಾಹ್ಮಣನು ತನಗುಂಟಾದ ಲಾಭದಿಂದ ಸಹಸ್ರ ಜನರಿಗೆ ಶ್ರೀಪಾದವಲ್ಲಭರ ಆಶ್ರಮದಲ್ಲಿ ಊಟ ಹಾಕಿಸಲು ಹಣದೊಂದಿಗೆ ಯಾತ್ರೆಗೆ ಹೊರಡುತ್ತಾನೆ. ಮೂವರು ಕಳ್ಳರು ತಾವೂ ಶ್ರೀಪಾದರ ಭಕ್ತರೆಂದು ಹೇಳಿಕೊಂಡು ಕಳ್ಳರ ಜೊತೆ ಸೇರುತ್ತಾರೆ. ಮಾರ್ಗ ಮಧ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಈ ಕಳ್ಳರು ವಲ್ಲಭೇಷನನ್ನು ಕೊಂದು ಆತನ ಹಣವನ್ನು ಕದ್ದು ಹೊರಡುವುದರಲ್ಲಿದ್ದಾಗ, ಭಕ್ತ ಪ್ರೇಮಿಯಾದ ಶ್ರೀಪಾದರು ಪ್ರತ್ಯಕ್ಷರಾಗಿ ಕಳ್ಳರನ್ನು ಸಂಹರಿಸುತ್ತಾರೆ. ಇದರಲ್ಲಿ ಒಳ್ಳೆಯ ಬುದ್ಧಿಯುಳ್ಳ ಒಬ್ಬಾತ ಗುರುವನ್ನು ಪ್ರಾರ್ಥಿಸುತ್ತಾನೆ. ಆಗ ಗುರುವು ವಿಭೂತಿಯನ್ನು ನೀಡಿ ವಲ್ಲಭೇಶನ ರುಂಡಮುಂಡಗಳನ್ನು ಸೇರಿಸಿ, ವಿಭೂತಿ ಹಚ್ಚಲು ಹೇಳಿ, ವಲ್ಲಭೇಷನಿಗೆ ಜೀವದಾನ ಮಾಡುವ ಶ್ರೀಪಾದರ ಅಪಾರ ಮಹಿಮೆಯು ಹತ್ತನೆಯ ಅಧ್ಯಾಯದಲ್ಲಿದೆ. ಮುಂದೆ ಬೇರೆಯ ಅವತಾರವೆತ್ತುವ ಸಲುವಾಗಿ ಗುರುಗಳು ಅದೃಶ್ಯರಾಗುತ್ತಾರೆ. 

ಮುಂದುವರಿಯುವುದು.....

No comments:

Post a Comment