ಒಟ್ಟು ನೋಟಗಳು

Monday, May 8, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2  

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 
  ನಿತ್ಯ ಸತ್ಸಂಗ  - 
60

ಪಾದುಕೆ ಕೊಟ್ಟರೆ ಬೇಜಾರಿಲ್ಲವೇ? 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।

ಈ ಮನೆ ನನಗೆ ಗುರುವಿನ ಸ್ಥಾನ ಕೊಟ್ಟಿದೆ. ಗುರುಗಳೆ  ಎಂದು ಮೊದಲು ಕರೆದದ್ದು ಈ ಮನೆ. ಈ ಮನೆಯ ಹಿರಿಯರಾದ ಅಜ್ಜನವರನ್ನು (ಲಾಯರ್) ಎನ್ನುತ್ತಿದ್ದರು. ಅತ್ಯಂತ ಗೌರವದಿಂದ ನೋಡುತ್ತಿದ್ದರು. ಅವರು ಬಹಳ ಆದರದಿಂದ ಗುರುಗಳನ್ನು ಮಾತನಾಡಿಸುತ್ತಿದ್ದರು. ಗುರುವಿನ ಅಂತಃಕರಣವನ್ನು ಬಲ್ಲವರಾರು ? ಗುರುವಿನ ಪರೀಕ್ಷೆಯೂ ವಿಚಿತ್ರವೇ. ಚಿಕ್ಕಮಗಳೂರಿನ ಆ ಗುರುನಾಥರ ಭಕ್ತೆ ಮತ್ತೆ ತಮ್ಮ ಸತ್ಸಂಗ ಮುಂದುವರೆಸಿದರು. 

'ಸಖರಾಯಪಟ್ಟಣಕ್ಕೆ ಹೋಗುವುದು ಎಂದರೆ ನಮಗೇನೋ ಸಂತಸ. ಗುರುನಾಥರ ಬಳಿ ಕುಳಿತಷ್ಟು ಹೊತ್ತೂ ನಮಗೆ ನೆಮ್ಮದಿ. ಗುರುನಾಥರು ಏನು ಹೇಳುತ್ತಾರೋ ಅದರಂತೆ ನಡೆಯುವುದೊಂದೇ ನಮ್ಮ ಜೀವನವಾಗಿತ್ತು. ಅಂದು ಗುರುನಾಥರು ಪಾದುಕೆಯೊಂದನ್ನು ಕೊಟ್ಟು ಆಶೀರ್ವದಿಸಿದರು. ನಮಗೆ ಹಿಂದೂ ಮುಂದೇನೂ ತಿಳಿದಿರಲಿಲ್ಲ. ಗುರುನಾಥರು ಪ್ರೀತಿಯಿಂದ 'ಇದು ಜಗದ್ಗುರು ಪೀಠದ ಶ್ರೀ ಶ್ರೀ ಭಾರತೀ ತೀರ್ಥರ ಪಾದುಕೆ. ಇದನ್ನು ನಿಮಗೆ ಕೊಡುತ್ತಿದ್ದೇನೆ. ಬೇಜಾರು ಇಲ್ಲವಲ್ಲಾ?' ಎಂದು ಕೇಳಿದಾಗ ನಾವು 'ಅಯ್ಯೋ ಗುರುನಾಥರೇ, ನೀವು ಕೊಟ್ಟದ್ದು ಮಹಾಪ್ರಸಾದ. ಬೇಜಾರೇಕೆ? ನೀವು ತಿಳಿಸಿದಂತೆ ನಡೀತೀವಿ' ಎಂದೆವು. 

ಬಹುಶಃ 2001ನೆಯ ಇಸವಿ ಇರಬೇಕು. ನಮ್ಮ ಮನೆಗೆ ಹೀಗೆ ಗುರುನಾಥರು ಜಗದ್ಗುರು ಪಾದುಕೆಗಳನ್ನು ದಯಪಾಲಿಸಿದರು. ಅದು ನಮ್ಮ ದೇವರ ಮನೆಯನ್ನು ಅಲಂಕರಿಸಿ ಶೋಭೆಯನ್ನು ಹೆಚ್ಚಿಸಿತು. ಮುಂದೆ ಅನೇಕ ವಿಗ್ರಹಗಳನ್ನು ದಯಪಾಲಿಸಿದರು. ಎಲ್ಲಿಂದಲೋ ಸಾಲಿಗ್ರಾಮ ಬಂದಿತು. ಇಷ್ಟು ಪ್ರಸಾದಿಸಿಯೂ ತೃಪ್ತರಾಗದ ಗುರುನಾಥರು ಮೊಟ್ಟ ಮೊದಲು ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವೇದಿಕೆಯನ್ನು ನಿರ್ಮಿಸಿ ನಮ್ಮ ಮನೆಯನ್ನು ಪುನೀತವಾದ ದೇಗುಲವಾಗಿಸಿದರು. 

... ಗುರುಕರುಣೆಯನ್ನು ಕೊಡುವಾಗ ಆತ ಹೊರಲಾರದಷ್ಟು ಕೊಡುತ್ತಾನೆಂಬುದನ್ನು ಆ ತಾಯಿ ಪ್ರಕಟಿಸಿದ್ದು ಹೀಗೆ. ವೇದಿಕೆ ನಿರ್ಮಾಣವಾದ ಪ್ರಸಂಗ ಮುಂದುವರೆಯಿತು. 

"ಗುರುನಾಥರು ವೇದಿಕೆ ನಿರ್ಮಾಣದ ವಿಚಾರ ತಿಳಿಸಿದಾಗಲೂ ನಾವಿಬ್ಬರೂ ದೀರ್ಘದಂಡ ನಮಸ್ಕಾರ ಮಾಡಿ, ಗುರುವೇ ನಮಗೇನೂ ತಿಳಿಯದು. ನೀವು ಹೇಗೆ ಹೇಳಿದರೆ ಅದರಂತೆ ನಡೆಯುವವರು ನಾವು ಎಂದೆವು. ನಮ್ಮವರ ಕೈಲೇ 'ನೀನೇ ಹೋಗಿ 45 ಸೈಜು ಕಲ್ಲುಗಳನ್ನು ತಾ' ಎಂದು ಹೇಳಿ ತರಿಸಿ, ತಾವೇ ಸ್ವತಃ ನಿಂತು ಈ ವೇದಿಕೆಯನ್ನು ತಮ್ಮ ಕೈಯಾರೆ ಗುರುನಾಥರೇ ನಿಂತು ಪೂರ್ಣಗೊಳಿಸಿದರು. ಅವರೇ ಪೂಜೆ ಮಾಡಿಸಿದರು. 'ವೇದಿಕೆ, ದೇವರ ಕೋಣೆ ಎಂದು ಬೇರೆ ಮಾಡಬೇಡಮ್ಮಾ. ನಿನಗೆ ಎಲ್ಲಾ ಅದೇ' ಎಂದು ತಿಳಿಸಿದರು. ಈ ಮನೆಯಲ್ಲಿ ಅದೆಷ್ಟು ಅರುಣ ಪಾರಾಯಣವನ್ನು ಗುರುನಾಥರು ಮಾಡಿಸಿದರೋ! ಎಂದಾದರೂ ನಮ್ಮವರು ಆಲಸ್ಯವೆಂದು ಮಲಗಿದ್ದರೆ, ಫೋನು ಮಾಡಿಸಿ ಅರುಣನ ಒದ್ದು ಕಾಲು ಚಾಚಿ ಮಲಗಿದ್ದೀಯಾ?' ಎಂದು ಫೋನು ಮಾಡಿಸಿ ನಮ್ಮನ್ನು ಎಚ್ಚರಿಸುತ್ತಿದ್ದ ಕರುಣಾಮಯಿ ಅವರಾಗಿದ್ದರು" ಎಂದರು ಆ ತಾಯಿ. 

ಪ್ರಿಯ ಓದುಗ ಮಿತ್ರರೇ, ಈ ಭಕ್ತೆಗೆ ಗುರುನಾಥರಿತ್ತಿರುವುದು ಸಾಗರದಗಲದ ಪ್ರೀತಿ, ಕರುಣೆ, ಆಶೀರ್ವಾದ. ಅದರಲ್ಲಿ ನಮಗೂ ಸ್ವಲ್ಪ ಲಭ್ಯವಾಗಲು ನಾಳೆಯೂ ನಮ್ಮೊಂದಿಗಿರಿ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment