ಒಟ್ಟು ನೋಟಗಳು

238902

Friday, May 26, 2017

ಗುರುನಾಥ ಗಾನಾಮೃತ 

ಅವಿದ್ಯೆ ಆವರಿಸಿಹ ಈ ಜಗದಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಅವಿದ್ಯೆ ಆವರಿಸಿಹ ಈ ಜಗದಲಿ
ಆತ್ಮನ ತಿಳಿಯುವುದೆಂತು
ಮಾಯಾವೃತವೀ ಭುವಿಯಲಿ
ಸತ್ಯವ ಅರಿಯುವುದೆಂತು ..।।


ಮಾಯೆಯಾವರಣ ಕಳೆದು
ಮಿಥ್ಯಾಜ್ಞಾನವು ಸರಿದು
ಬೆಳಗುತಿಹ ಶುದ್ಧಮನದಲಿ
ಆತ್ಮಜ್ಯೋತಿಯು ಬೆಳಗಲಿ ।।


ಗುರುತೋರುವ ಮಾರ್ಗದಿ ನಡೆಯುತಾ
ಗುರಿ ಮುಟ್ಟುವ ಭರದಿ ಸಾಗುತಾ
ಅರಿವಿನಾಲಯದತ್ತ ಸಾಗಲಿ
ಜ್ಞಾನಜ್ಯೋತಿಯು ಬೆಳಗಲಿ ।।


ಎಡರುತೊಡರುಗಳೆಲ್ಲವ ದಾಟಿ
ಭಾವವೀಣೆಯನು ಮೀಟಿ
ಪ್ರೇಮಾಮೃತವನು ಹಂಚಲಿ
ಆತ್ಮಾನಂದದಲಿ ನಲಿಯಲಿ ।।

No comments:

Post a Comment