ಒಟ್ಟು ನೋಟಗಳು

Saturday, May 20, 2017

ಗುರುನಾಥ ಗಾನಾಮೃತ 

ಸಾಷ್ಟಾಂಗ ವಂದನೆ ಸದ್ಗುರುನಾಥನೇ 
ರಚನೆ: ಅಂಬಾಸುತ 


ಸಾಷ್ಟಾಂಗ ವಂದನೆ ಸದ್ಗುರುನಾಥನೇ 
ಸಂತತ ನಿನ್ನ ಸೇವೆ ನೀಡೋ ಹೇ ಅವಧೂತನೇ ।। ಪ ।।

ಉಸಿರುಸಿರಲೂ ನಿನ್ನ ನಾಮ ತುಂಬೋ ಗುರುನಾಥನೇ 
ನಾನಾಡುವ ಪ್ರತಿ ಮಾತಲೂ ನೀನಿರು ಅವಧೂತನೇ ।। 1 ।।

ಕರ್ತೃ ಕಾರ್ಯ ಕಾರಣವೆಲ್ಲಾ ನೀನೇ ಗುರುನಾಥನೇ 
ಕಣ್ಮುಂದಿನ ಪ್ರತ್ಯಕ್ಷ ದೈವ ನೀ ಅವಧೂತನೇ ।। 2 ।।

ಚಿಂತೆಯ ಪರಿಹರಿಸುವ ಚಿನುಮಯನೇ ಗುರುನಾಥನೇ 
ಚಿತ್ತದ ಅಂಧಕಾರವಾ ಕಳೆಯುವ ಅವಧೂತನೇ ।। 3 ।।

ಸದ್ಭುದ್ಧಿ ಸತ್ಸಂಗ ನೀಡೋ ಗುರುನಾಥನೇ 
ಸತ್ಯದ ಸುಖದಾರಿಯೊಳೂ ನೆಡೆಸೋ ಅವಧೂತನೇ ।। 4 ।।

ಪರಬ್ರಹ್ಮ ಪರಮೇಶ್ವರಿ ನೀನೇ ಗುರುನಾಥನೇ 
ಪರತತ್ವವನ್ನೇ ಬೋಧಿಸೋ ಅವಧೂತನೇ ।। 5 ।।

ಸಖರಾಯಪುರವಾಸ ನೀ ಗುರುನಾಥನೇ 
ವೇಂಕಟಾಚಲನೆಂಬೋ ನಾಮದ ಅವಧೂತನೇ ।। 6 ।।

ತಾಯ್ತಂದೆ ಬಂಧುಬಳಗ ನೀನೇ ಗುರುನಾಥನೇ 
ನಿನ್ನನು ಬಿಟ್ಟರೆ ಅನ್ಯರ ಕಾಣೆ ಅವಧೂತನೇ ।। 7 ।।

ಅಂಬಾಸುತನಾ ಹೇ ಗುರುನಾಥನೇ 
ಅನವರತಾ ಅವನಂತರಂಗದೊಳಿರೂ ಅವಧೂತನೇ ।। 8 ।। 

No comments:

Post a Comment