ಒಟ್ಟು ನೋಟಗಳು

Saturday, May 27, 2017

ಗುರುನಾಥ ಗಾನಾಮೃತ 

ಸಖರಾಯಪುರದಾ ಯಾತ್ರೆಯಾ
ರಚನೆ: ಅಂಬಾಸುತ 


ಸಖರಾಯಪುರದಾ ಯಾತ್ರೆಯಾ
ಸಖರಾಯಪುರದಾ ಯಾತ್ರೆಯಾ ಮಾಡಿರೀ ಸದ್ಗುರುನಾಥನಾ ಸಾಮೀಪ್ಯ ಪಡೆಯಿರೀ ||ಪ||


ತ್ರಿಮೂರ್ತಿ ಅವತಾರಾ ದತ್ತ ದಿಗಂಬರಾ
ಅವಧೂತನಾಗೀ ಅವನಿಲ್ಲಿ ಸಾಕಾರಾ
ಬಂದಾ ದೀನರಾ ಬವಣೆಗಳ ಕಳೆಯುತ್ತಾ
ನಿಂತಿಹಾ ಸ್ಥಳವಿದುವೇ ಅಮರಕಲ್ಯಾಣಾ ||1||


ಮೂರು ದಾರಿಯ ದಾಟೀ ಆರು ಮೆಟ್ಟಿಲ ತುಳಿದೂ
ಅತಿಷಯದಾ ಭಾವದಲೀ ಗುರುವೆಂದೂ ನೆನೆದೂ
ಮನದಾ ಮಲ್ಲಿಗೆ ಹೂವೂ ಭಕ್ತಿಯೆಂಬುವ ಹಣ್ಣಾ
ಅವನಡಿಗೇ ಅರ್ಪಿಸೀ ಆನಂದ ಪಡೆಯೋಣಾ ||2||


ತುಂಬಿದಾ ಮನೆಯದುವೇ ಸ್ವರ್ಗದಾ ಬಿಂಬಾವೇ
ಆನಂದಾ ವಶರಾಗಿ ನಲಿದೀಹ ಭಕ್ತಾರೇ
ಅನ್ನಪೂರ್ಣೆಯೇ ಸಾಕ್ಷಾತ್ ನೆಲೆಸಿಹ ನಿವಾಸಾ
ಹಸಿವೆಂಬುದಿಲ್ಲದಾ ಭೂಕೈಲಾಸಾ ||3||


ಆರತಿ ಭಜನೇ ವೇದ ಪಾರಾಯಣಗಳೂ
ಆಸ್ತಿಕರಿಗೆ ಅತಿ ಮುದದಾ ದೇವರ ನಾಮಗಳೂ
ಕಾಯಕವೇ ಕೈಲಾಸಾ ಎನ್ನುವಾ ನುಡಿಮುತ್ತೂ
ಇಂಥಾ ಸನ್ಮಾರ್ಗಗಳೇ ಇಲ್ಲಿನಾ ಕೈತುತ್ತೂ ||4||


ವಿದೇಹಾ ಜೀವಿಗಳಾ ಆತ್ಮೋದ್ಧಾರಾ
ನಿಜಭಕ್ತರಿಗಿಲ್ಲೀ ದೈವ ಸಾಕ್ಷಾತ್ಕಾರಾ
ವೇಂಕಟಾಚಲನೆಂಬೋ ನಾಮವ ಧರಿಸೀ
ಪರಮಾತ್ಮ ಪಡೆದಿಹಾ ಪೂರ್ಣಾವತಾರಾ ||5||

No comments:

Post a Comment