ಒಟ್ಟು ನೋಟಗಳು

Monday, May 22, 2017

ಗುರುನಾಥ ಗಾನಾಮೃತ 

ನೋಡಿದೆನು ನಮ್ಮಾ ಗುರುವರನಾ
ರಚನೆ: ಅಂಬಾಸುತ 


ನೋಡಿದೆನು ನಮ್ಮಾ ಗುರುವರನಾ
ನೋಡಿದೆನು ನಮ್ಮಾ ಗುರುವರನಾ
ಮನಬಾಗೀ ಬೇಡಿದವಗೇ
ಮೋಕ್ಷವನ್ನೇ ಕೊಡುವವನಾ ||ಪ||


ಮಾರ್ಗಶೀರ್ಷಾ ಕೃಷ್ಣಪಕ್ಷದಾ
ಷಷ್ಠಿಯಾ ಶುಭದಿನಾದಂದೂ
ಅವತಾರಾ ತಾಳಿದಾ
ಪೂರ್ಣಬ್ರಹ್ಮ ಭುವೀಶನಾ ||1||


ವೇಂಕಟಾಚಲನೆಂಬೊ ನಾಮವ
ಪೊತ್ತವನ ಧರೆ ಉದ್ಧರಿಸಿದವನಾ
ದೋಷವಿರದಾ ಭಕ್ತಿಪಾತ್ರನಾ
ಧಾರುಣಿಯ ಅವಧೂತನಾ ||2||


ಅದ್ವೈತವ ಸಾರಿದವನಾ
ಆನಂದವ ತೋರಿದವನಾ
ಚಿತ್ತದೊಳು ಬಂದು ನೆಲೆ ನಿಂತೂ
ವಿತ್ತಭ್ರಾಂತಿಯ ಕಳೇದವನಾ ||3||


ಸ್ವಪ್ನದೊಳು ಸಾಮೀಪ್ಯ ತೋರೀ
ಗುಪ್ತವಾಗೀ ಗ್ನಾನ ನೀಡೀ
ಸಪ್ತಜನ್ಮದ ಪಾಪ ಕಳೆದಾ
ಸಖರಾಯಾಧೀಶನಾ ||4||


ಧರ್ಮ ಮಾರ್ಗದಿ ನೆಡೆಯಿರೆನುತಾ
ಗುರುಪಾದವ ಪಿಡಿಯಿರೆನುತಾ
ಶುದ್ಧಭಾವದಿ ಬಾಳಿರೆಂದಾ
ದತ್ತನಾ ಅವತಾರಿಯಾ ||5 ||


ದಟ್ಟಿ ಉಟ್ಟೂ ದಿಟ್ಟನಾಗೀ
ಕಷ್ಟ ಹರಿಸಿದ ರುದ್ರನಾ
ಮುಗುಳುನಗುತಲಿ ಸನ್ನೆ ಮಾಡುತಾ
ದುಖ ನೀಗಿದ ಕೃಷ್ಣನಾ ||6||


ಆಷಾಡ ಬಹುಳಾ ಪಂಚಮಿಯದಿನ
ದೇಹವನ್ನೇ ತ್ಯಜಿಸಿದವನಾ
ಭಕ್ತೋದ್ಧಾರಕೆ ಅವತರಿಸಿದಾ
ಪರಬ್ರಹ್ಮ ರೂಪನಾ ||7||


ಅಂಬಾಸುತನಾ ಅಂತರಂಗದ
ಆತ್ಮಾರಾಮನಾ
ಸಖರಾಯಪುರವಾಸೀ
ಸದ್ಗುರುನಾಥನಾ ||8||

No comments:

Post a Comment