ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 12
ನರಹರಿಯು ಜ್ಞಾನವನು ಹೇಳುತ । ತೊರೆದು ತಾಯ್ತಂದೆಗಳ ಕಾಶೀ ।
ಪುರದಿ ಸನ್ಯಾಸವನು ಕೊಂಡನು ದ್ವಾದಶಾಧ್ಯಾಯ ।। 12 ।।
ಉಪನಯನದಲಿ ಮಾತೃಭಿಕ್ಷೆ ಪಡೆದ ನರಹರಿಯು ತಾನು ತೀರ್ಥಯಾತ್ರೆಗೆ ಹೊರಡುವೆನೆಂದಾಗ ತಂದೆ ತಾಯಿಗಳು ಮರುಗುತ್ತಾರೆ. ಮಗನ ಬಾಲಭಾಷೆಯನ್ನು ಕೇಳದ ಅವರ ಮನ ಕುಗ್ಗುತ್ತದೆ. ಮುಂದೆ ತಾಯಿಯ ಬೇಡಿಕೆಯಂತೆ ಒಂದು ವರುಷ ಮನೆಯಲ್ಲಿ ಉಳಿಯುತ್ತಾರೆ. ತಂದೆ ತಾಯಿಗಳಿಗೆ ಪೂರ್ವಜನ್ಮದ ಸ್ಮರಣೆಯನ್ನು ತಂದುಕೊಟ್ಟು ತಮ್ಮ ದತ್ತಾತ್ರೇಯ ರೂಪವನ್ನು ತೋರಿಸುತ್ತಾರೆ. ಒಂದು ವರ್ಷದಲ್ಲಿ ತಾಯಿಗೆ ಎರಡು ಅವಳಿ ಮಕ್ಕಳಾಗುತ್ತವೆ. ಎಲ್ಲರ ಅನುಮತಿ ಪಡೆದು ಕಾಶಿಗೆ ಬಂದ ನರಹರಿಯ ಅಪಾರ ವಿದ್ಯೆ, ವೇದ ಪಾಂಡಿತ್ಯವನ್ನು ಕಂಡ ಅಲ್ಲಿನ ಋಷಿ ಮುನಿಗಳು "ಸನ್ಯಾಸಾಶ್ರಮದ ಉದ್ಧಾರಕ್ಕಾಗಿ ಸನ್ಯಾಸಿಗಳಾಗಬೇಕು" ಎಂದು ಕೇಳಿಕೊಳ್ಳುತ್ತಾರೆ. "ನರಸಿಂಹ ಸರಸ್ವತಿ" ಎಂಬ ನಾಮಧೇಯದಿಂದ ಸನ್ಯಾಸಿಗಳಾಗಿ ವೇದಗಳ ಅರ್ಥವನ್ನು ಹೇಳುತ್ತಾ ಅಪಾರ ಶಿಷ್ಯ ಸಮೂಹವನ್ನು ಹೊಂದುವ ವಿಚಾರ - ಹನ್ನೆರಡನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು.....
No comments:
Post a Comment