ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 21
ಯತಿಯ ಉಪದೇಶದಲಿ ಪ್ರೇತಕೆ । ಮತಿಯ ಬಂತು ಔದುಂಬರದೊಳಾ ।
ಸತಿಗೆ ಸಂತಸವಿತ್ತನಿಪ್ಪತ್ತೊಂದರಲಿ ಗುರುವು ।। 21 ।।
ಔದುಂಬರದಡಿಯಲ್ಲಿ ಗುರುವನ್ನು ಧ್ಯಾನಿಸುತ್ತ, ಗುರುವರದಿಂದ ಹುಟ್ಟಿದ ಈ ಮಗು ದೀರ್ಘಾಯುಷಿ. ಇದು ಅಕಾಲಮರಣ ಹೊಂದುವ ಸಾಧ್ಯತೆಯೇ ಇಲ್ಲವೆಂದು ಪ್ರಲಾಪಿಸುತ್ತಾ ರಾತ್ರಿ ಆಕೆ ಹಾಗೆಯೇ ನಿದ್ದೆ ಹೋಗುತ್ತಾಳೆ. ಸ್ವಪ್ನದಲ್ಲಿ ಬಂದ ಗುರುಗಳು "ನಿನ್ನ ಭಾವನೆಗೆ ತಕ್ಕ ಫಲವಿದ್ದೇ ಇರುತ್ತದೆ" ಎಂದು ಹೇಳಿ ಆ ಮಗುವನ್ನು ಬದುಕಿಸಿದಂತೆ ಕನಸು ಕಾಣುತ್ತಾಳೆ. ಬೆಳಗಾದುದರಿಂದ ಊರ ಜನಗಳು "ಇನ್ನು ಈ ಸತ್ತ ಶಿಶು ದುರ್ವಾಸನೆಗೀಡಾಗಿರುತ್ತದೆ. ಸಂಸ್ಕಾರಕ್ಕೆ ಅವಳು ಮಗುವನ್ನು ಕೊಡುತ್ತಾಳೆ" ಎಂದು ಚಿಂತಿಸುತ್ತ ಬಂದಾಗ ಆಶ್ಚರ್ಯ ಕಾದಿರುತ್ತದೆ. ಮಗುವು ಆಟವಾಡುತ್ತಿರುತ್ತದೆ. ಆ ದಂಪತಿಗಳು ಇದನ್ನು ಕಂಡು ತಾವು ಕಂಡದ್ದು ಸ್ವಪ್ನವಲ್ಲ, ನಿಜವೆಂದು ಅರಿತು ಗುರುವನ್ನು ಕೊಂಡಾಡುವ ಘಟನೆ ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು...
No comments:
Post a Comment