ಗುರುನಾಥ ಗಾನಾಮೃತ
ಗುರುವರನ ನೆನೆ ಮನವೇ
ರಚನೆ: ಅಂಬಾಸುತ
ಗುರುವರನ ನೆನೆ ಮನವೇ
ಸದ್ಗುರುವರನ ನೆನೆ ಮನವೇ ||
ಅಗಣಿತಗುಣಗಣ ಭೂಷಿತನವನೇ
ಆನಂದ ರೂಪಿ ಅಂತರ್ಯಾಮಿ ||
ತಮವ ಕಳೆಯುವವನವನೇ
ತನ್ಮಯತೆ ನೀಡುವವನವನೇ
ತಾರತಮ್ಯವಿರದಂಥಾ ಪ್ರೀತಿಯಾ
ಸಕಲ ಭಕುತರಿಗೆ ನೀಡುವನವನೇ ||
ಸಾಧನೆಯೊಳಗಡಗಿಹನೇ
ಸಾತ್ವಿಕತೆಗೆ ಒಲಿಯುವನೇ
ಸಾಹುಕಾರರಾ ಅಂಕೆಗೆ ಸಿಗದಾ
ಸಾಧು ಸತ್ಪುರುಷನು ಇವನೇ ||
ಸಖರಾಯಪುರದೊಳು ಇಹನೇ
ಅವಧೂತನಾಗಿ ನೆಲೆಸಿಹನೇ
ಅಂಬಾಸುತನಾ ಅನವರತ ಪೋಷಿಸಿ
ಅನಂತ ತಾನಾಗಿಹನೇ
ಅನಂತ ತಾನಾಗಿಹನೇ ||
No comments:
Post a Comment