ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 38
ನಿಮ್ಮ ಜೊತೆ ಅಖಂಡ ಭಜನೆಯಲ್ಲಿದೆ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಬಳಿ ಬರುವ ಭಕ್ತರಿಗೆ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ, ಗುರು ವಾಕ್ಯದಲ್ಲಿ ಆ ಭಕ್ತ ನಂಬಿಕೆ ಇಟ್ಟಿದ್ದಾನೆಂದು ಅರಿತ ಮೇಲೆ ಭಕ್ತರ ಎಲ್ಲ ಆಸೆಗಳನ್ನು ಪೂರೈಸುವ ಕಲಿಯುಗದ ಕಾಮಧೇನು ನಮ್ಮ ಸಖರಾಯಪಟ್ಟಣದ ಗುರುವರ್ಯರಾಗಿದ್ದರು ಎಂದು ಸ್ಮರಿಸುವ ಶ್ರೀಧರಮೂರ್ತಿಯವರು ಹೇಳುತ್ತಾರೆ: "ನಮ್ಮ ಶಂಕರಲಿಂಗನೂ ಒಂದೇ, ಸಖರಾಯಪಟ್ಟಣದ ಅವಧೂತರೂ ಒಂದೇ ಎಂಬುದು ನನ್ನ ದೃಢ ಭಾವನೆ. ನಾನು ಎಂದೂ ಗುರುವಿನಲ್ಲಿ ಬೇಡಿದುದು ಎಂದರೆ, ಅಪ್ಪ ಅಮ್ಮ ಹಿರಿಯರ ಸೇವೆ ಮಾಡುವ ಹೆಂಡತಿಯನ್ನು ಕೊಡು, ತಂದೆ ಗುರುಭಕ್ತಿಯುಳ್ಳ ಮಕ್ಕಳನ್ನು ನೀಡಿ ಅವರನ್ನು ಪಾರುಗಾಣಿಸು ಎಂದೆ. ಇದು ನೋಡಿ ನನ್ನ ಮಗಳ ಮದುವೆಯನ್ನೇ ಗುರುನಾಥರ ದರ್ಶನ ಮಾಡಿದ ಕೆಲ ಗಂಟೆಗಳಲ್ಲೇ ಅವರು ಮಗಳ ಮದುವೆ ಮಾಡಿಸಿ ನನ್ನೆಲ್ಲಾ ಕೆಲಸವನ್ನೂ ಹಗುರ ಮಾಡಿದರು. ಇದಕ್ಕಿಂತ ಬೇರೆ ಪುರಾವೆ ಬೇಕೇ ನಮ್ಮ ಶಂಕರಲಿಂಗಪ್ಪನೇ ಗುರುನಾಥರು ಎಂಬುದಕ್ಕೆ".
ಮದುವೆ ಎಂಬ ಘನ ಕೆಲಸ ಗುರುನಾಥರ ಕೃಪೆಯಿಂದ 'ಚಿಟಿಕೆ ಚಪ್ಪರ' ಎಂಬುವ ರೀತಿಯಲ್ಲಿ ನಡೆದು ಹೋಯಿತು. ಗುರುನಾಥರು ಬಂದು ಶ್ರೀಧರಮೂರ್ತಿಯವರಿಗೆ ನಮಸ್ಕರಿಸಿದಾಗ, ಮೂರ್ತಿಗಳು ಹೌಹಾರಿದರಂತೆ. ಇವರೂ ಗುರುನಾಥರಿಗೆ ಮತ್ತೆರಡು ಬಾರಿ ನಮಸ್ಕರಿಸಿದರು. ಶಂಕರಲಿಂಗ ಭಗವಾನರ ಮೊಮ್ಮಗನೆಂದು ಅರಿತ ಗುರುನಾಥರು, ಮೊಮ್ಮಗನಲ್ಲೂ ಭಗವಾನರನ್ನು ಕಂಡಿದ್ದಾರೆ. ಎಲ್ಲ ಸಾಮಾನ್ಯರಲ್ಲೂ ಪರಮಾತ್ಮನನ್ನೇ ಕಂಡು ನಮಸ್ಕರಿಸುವ ಗುರುನಾಥರಿಗೆ ಗುರು ಪರಂಪರೆಯಿಂದ, ಅದರಲ್ಲೂ ತಮ್ಮ ಆರಾಧ್ಯ ಗುರುವಾದ ಶಂಕರಲಿಂಗನ ಕಡೆಯವರೆಂದರೆ ಮುಗಿದೇ ಹೋಯಿತು. ಮುಂದೆ ಗುರುನಾಥರೇ ಮಾತನಾಡಿಸಿ "ನಿಮ್ಮ ಜೊತೆ ಕೋಮಾರನಹಳ್ಳಿಯಲ್ಲಿ ಅಖಂಡ ಭಜನೆಯಲ್ಲಿದ್ದೆ. ನೀವು ಸೊಗಸಾಗಿ ಹಾಡುತ್ತೀರಿ" ಎಂದು ಹೇಳಿ, ಒಂದೆರಡು ಹಾಡುಗಳನ್ನು ಮೂರ್ತಿಯವರಿಂದ ಹಾಡಿಸಿದರಂತೆ.
ಮೂರ್ತಿಯವರು ಇನ್ನೂ ಸಂಭ್ರಾಂತರಾಗಿ "ಗುರುದೇವ ಅಂದು ನೀವು ಯಾವ ರೂಪದಲ್ಲಿ ನನ್ನ ಜೊತೆಗಿದ್ದಿರೋ ನನಗೆ ನೆನಪಿಲ್ಲ. ನಿಮ್ಮ ಕೃಪೆಯಿಂದ ನನ್ನ ಸೌಭಾಗ್ಯ ಜಾಗೃತವಾಗಿದೆ" ಎಂದು ಮತ್ತೂ ವಿನೀತರಾದರು.
ಗುರುವಾಕ್ಯದಂತೆ ಮದುವೆ ಏನೋ ಆಯಿತು. ಬೆಂಗಳೂರಿನಿಂದ ಬಂದವರೇ ಮಗಳ ಮದುವೆ ಬೆಂಗಳೂರಿನಲ್ಲಿ ಆದರೂ ಊರವರಿಗೆಲ್ಲಾ ಒಂದು ಊಟ ಹಾಕಬೇಕು, ಬಂಧುಗಳಿಗೆಲ್ಲಾ ತಿಳಿಸಬೇಕೆಂದು ಮೂರ್ತಿಗಳು ಚಿಂತಿಸಿದರಂತೆ. ಹೇಗೆ ಸಾಧ್ಯ? ಅಷ್ಟು ಸುಲಭವಾಗಿ ಛತ್ರ, ಅಡಿಗೆಯವರು, ಬಂಧುಗಳಿಗೆ ಸಮಾಚಾರ ತಿಳಿಸುವುದೇನು ಸುಲಭವೇ?
ಒಂದು ದಿನದಲ್ಲಿಯೇ ದೊಡ್ಡ ಛತ್ರ ದಾವಣಗೆರೆಯಂತಹ ಸಿಟಿಯಲ್ಲಿ ಸಿಕ್ಕಿತು. ಅಡಿಗೆಯವರು ಬಂದರು. ಬೆಳಗಾಗುವುದರಲ್ಲಿ ಐದು ನೂರಕ್ಕೂ ಹೆಚ್ಚು ಜನ ಮದುವೆಯ ರಿಸೆಪ್ಷನ್ ಗೆ ಬಂದು ಸಂತಸಪಟ್ಟರು. ಗುರುವಿನ ಅಗಾಧ ಲೀಲೆಯನ್ನು ಕೇಳಿದ ಜನ ಮೂಗಿನ ಮೇಲೆ ಬೆರಳಿಟ್ಟರು. ಇವೆಲ್ಲದರ ಹಿಂದೆ ಗುರುನಾಥರ ಕೃಪೆಯೇ ಕೆಲಸ ಸಾಧಿಸಿದ್ದು.
ಗುರುನಾಥರ ಸಂಬಂಧ ಹೀಗೆ ಬೆಳೆದು ಬೆಸೆದ ಮೇಲೆ ಅನೇಕ ಸಾರಿ ಗುರುನಾಥರ ದರ್ಶನಕ್ಕಾಗಿ ಇವರು ಹೋಗಿ ಬಂದಿದ್ದಾರೆ. ಆ ದರ್ಶನ ಅಲೌಕಿಕ ಆನಂದವನ್ನು ನೀಡಿದೆ. "ಗುರುನಾಥರ ದೇಹತ್ಯಾಗ ಮಾಡುವ ಒಂದು ವರ್ಷದ ಮೊದಲು ಶೃಂಗೇರಿ ಜಗದ್ಗುರುಗಳನ್ನು ಕರೆಸಿದಾಗ ನನಗೂ ಹೋಗುವ ಅವಕಾಶ ಸಿಕ್ಕಿತು. ನ ಭೂತೋ ನ ಭವಿಷ್ಯತಿ ಎನ್ನುವ ಸಂಭ್ರಮ, ಉತ್ಸಾಹ, ರಾಜ ಮಹಾರಾಜರು, ಮಠ ಮಾನ್ಯರನ್ನೂ ಮೀರಿಸುವಂತಹ ಅದ್ದೊರಿ, ಅಪ್ಯಾಯತೆ, ಪ್ರೀತಿ, ಕೊಡುಗೈ ದಾನಿಗಳು ಎಂತಹವರನ್ನೂ ಬೆರಗುಗೊಳಿಸಿತ್ತು. ಜಗದ್ಗುರುಗಳ ಕೃಪಾಶೀರ್ವಾದವನ್ನು ಬಂದ ಎಲ್ಲ ಭಕ್ತರಿಗೆ ಊರವರಿಗೆ ಕೊಡಿಸಿ ಧನ್ಯರಾಗಿಸಿದ ಗುರುನಾಥರ ಉದಾರತೆಯನ್ನು ಎಂದೂ ನಾನು ಮರೆತಿಲ್ಲ. ಇಂದೂ ಗುರುನಾಥರು ಅಶರೀರರಾಗಿಯೂ ಎಲ್ಲರ ಉಸಿರಾಗಿದ್ದಾರೆ. ಊರುಗೋಲಾಗಿದ್ದಾರೆ. ಇದು ನನ್ನ ಮನದ ಭಾವನೆ" ಎಂದವರು ಮೌನವಾದರು.
ಸದ್ಗುರುನಾಥ ಪ್ರಿಯರಾದ ನಿತ್ಯ ಸತ್ಸಂಗಾಭಿಮಾನಿಗಳೇ ಕೇವಲ ಮನದಲ್ಲಿ ಗುರುನಾಥರನ್ನು ಸ್ಮರಿಸುತ್ತಿದ್ದ ಭಕ್ತರಿಗೆ ಗುರುಕರುಣೆ ಅಗಾಧವಾಗಿ ದೊರೆತ ವಿಚಾರ ಕೇಳಿದಿರಲ್ಲ. ಅಂತಹ ಘಟನೆಗಳು ಎಲ್ಲರ ಜೀವನದಲ್ಲೂ ಜರುಗಿದರೆ, ಎಷ್ಟು ಚೆಂದ ಅಲ್ಲವೇ. ಅದು ನಿತ್ಯ ಸತ್ಸಂಗಾನುಭವದಿಂದ ಆದರೆ ಆಶ್ಚರ್ಯವಿಲ್ಲ. ಮಿತ್ರರೇ ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ...

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment