ಗುರುನಾಥ ಗಾನಾಮೃತ
ವರ್ಣಿಸಲಸದಳನೋ ಗುರುವರ ನಿಜಾನಂದ ರೂಪನವನೋ
ರಚನೆ: ಅಂಬಾಸುತ
ವರ್ಣಿಸಲಸದಳನೋ ಗುರುವರ ನಿಜಾನಂದ ರೂಪನವನೋ
ಆದ್ಯಂತರಹಿತಾ ಅಗಣಿತಗುಣ ಮಹಿಮಾ ಅನಂತ ರೂಪಾ ಅಪ್ರಮೇಯಾ ||ಪ||
ತಪ್ಪುಗಳೆಲ್ಲವನ್ನೂ ತಿದ್ದಿ ಬುದ್ದಿ ಹೇಳುತಾ ಕೈ ಪಿಡಿದು ಮುಂದೇ ನೆಡೆಸುವ ನಮ್ಮ ಗುರು ||೧||
ಕುಗ್ಗಿ ಕುಳಿತಾಗಲೆಲ್ಲಾ ಬಂದು ಹುರಿದುಂಬಿಸೀ ಎತ್ತರಕ್ಕೆ ಕರೆದೊಯ್ಯೊವ ನಮ್ಮ ಗುರು ||೨||
ಸುಮದೊಳಗಿರುವಾ ಸುವಾಸನೆಯಂತೇ ಮಧುವಿನೊಳಗಿನಾ ಮಧುರತೆಯಂತೇ
ಕಾಣದಿದ್ದರೂ ಕಲ್ಪನೆಗೆ ಸಿಗದಿದ್ದರೂ ಸೆಳೆದೂ ಸುಖವ ನೀಡುವಂಥಾ ನಮ್ಮಾ ಗುರು ||೩||
ಸಖರಾಯಪುರವಾಸನೋ ಗುರುವರಾ ವೇಂಕಟಾಚಲ ನಾಮನೋ
ಅಂಬಾಸುತಾದಿಯಾಗಿ ಅಂತರಂಗದ ಭಕ್ತರಿಗೆ ಆನಂದ ಆನಂದ ಆನಂದ ನೀಡೋ ಗುರು ||೪||
No comments:
Post a Comment