ಒಟ್ಟು ನೋಟಗಳು

Tuesday, July 18, 2017

ಗುರುನಾಥ ಗಾನಾಮೃತ 
ಕಾಕಡಾರತಿ ಬೆಳಗುವೆ ನಿನಗೇ ಅವಧೂತ ಗುರುವರ್ಯಾ
ರಚನೆ: ಅಂಬಾಸುತ 


ಕಾಕಡಾರತಿ ಬೆಳಗುವೆ ನಿನಗೇ ಅವಧೂತ ಗುರುವರ್ಯಾ
ಆನಂದ ರೂಪಾ ಅಮಿತವರದಾತಾ ನೀನೇ ನಿಜಸೂರ್ಯಾ ||ಪ||

ಗಣನೆಗೆ ನಿಲುಕದಾ ಲೀಲೆಗಳ ತೋರ್ದ ಸಚ್ಚಿದಾನಂದ ರೂಪಾ
ವೇದವಂದ್ಯ ಭವಬಂಧ ಹರಿಪ ನೀ ಅಜ ಹರಿಹರರೂಪಾ ||೧||

ಭಜಿಸುವ ಭಕ್ತರ ಭಾಗ್ಯದ ನಿಧಿ ನೀ ಕಲ್ಯಾಣ ಗುಣಧಾಮಾ
ಜ್ಞಾನ ಭಕ್ತಿ ವೈರಾಗ್ಯ ನೀಡುವ ನಿಜ ಸ್ವಾತ್ಮಾರಾಮಾ ||೨||

ಮೋಹದ ಮಾಯೆಯ ದೂರಿರಿಸೆನುತಾ ಬೇಡುವೆ ಗುರುರಾಯಾ
ನಾನಾರೆಂಬುದ ತೋರಿಸಲು ಬಾರೋ ಮಹನೀಯಾ ||೩||

ಸಖರಾಯಪುರವಾಸ ಶ್ರೀವೇಂಕಟಾಚಲ ನೀನೈ ಅವಧೂತಾ
ಅಂಬಾಸುತ ನಾ ಅಡಿಗೆರಗುವೆನೈ ಪಾಲಿಸೋ ಗುರುನಾಥಾ ||೪||

No comments:

Post a Comment