ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 52
ಗುರುವು ತನ್ನವತಾರವ ತೀರಿಸಿ । ತೆರಳಿದನು ಶ್ರೀಶೈಲಕೆನುತಲಿ । ಶರಣರೆಲ್ಲರೂ
ಮನದಿ ದುಃಖವ ತಾಳಿದರು ಮರುಗಿ || 52 ||
ಗುರು ಚರಿತ್ರವೆಂಬ ಮಧುವನ್ನು ಕೇಳಿ ಆನಂದಿತನಾದ ಶಿಷ್ಯ ಶಿರೋಮಣಿ ನಾಮಧಾರಕನು, ಮತ್ತೂ ಕೇಳಬೇಕೆಂದು ಆಶಿಸಿದಾಗ, ಸಿದ್ಧಮುನಿಯು ನಡೆದ ಚೋದ್ಯ ಒಂದನ್ನು ತಿಳಿಸುತ್ತಾರೆ. ಊರವರನ್ನೆಲ್ಲಾ ಸಂತೈಸಿದರೂ ದುಃಖದಿಂದ, ಗುರು ವಿಯೋಗದ ನೋವಿನಿಂದ ಗಾಣಗಾಪುರ ಮಠಕ್ಕೆ ತೆರಳಿದ ಭಕ್ತರಿಗೆ ಅಲ್ಲಿ ಶ್ರೀ ಗುರುಗಳು ನಗುಮುಖದಿಂದ ಕುಳಿತಿರುವುದು ಕಂಡು ಬರುತ್ತದೆ. ಅರೆಗಳಿಗೆಯಲ್ಲಿ ಮಾಯವಾಗುತ್ತಾರೆ. ಗುರು ನರನಲ್ಲವೆಂಬುದು ಖಚಿತವಾಗುತ್ತದೆ. ನಾಲ್ಕು ಜನ ಪರಮ ಶಿಷ್ಯರಿಗೆ ಗುರುಗಳು ಪುಷ್ಪಾಸನವನ್ನು ರಚಿಸಲು ಹೇಳಿ ಶ್ರೀ ಗಿರಿಗೆ ತೆರಳುತ್ತಾರೆ. "ನೀವು ಬರಿದೆ ಚಿಂತೆ ಮಾಡದಿರಿ. ಗಾಣಗಾಪುರದಲ್ಲಿ ನಿರ್ಗುಣ ರೂಪದಲ್ಲಿರುತ್ತೇನೆ. ನನ್ನ ಧ್ಯಾನ, ಪಾರಾಯಣ, ಮಾಡುವವರನ್ನು ನಿರಂತರ ನಾನು ರಕ್ಷಿಸುತ್ತೇನೆಂದು ಹೇಳಿ ಪುಷ್ಪಾಸನದಲ್ಲಿ ಕುಳಿತು ನದಿಯಲ್ಲಿ ತೆರಳುತ್ತಾರೆ. ನಂತರ ಪುಷ್ಪ ಪ್ರಸಾದ ಸ್ವೀಕರಿಸಿದ ನಾವು ನಾಲ್ವರಲ್ಲಿ ನನ್ನ ಈ ಪ್ರಸಾದವು ಈಗಲೂ ಹೇಗೆ ನಳನಳಿಸುತ್ತಿದೆ ನೋಡೆಂದು ತೋರಿದಾಗ, "ನನ್ನ ಜನ್ಮ ಈ ಪುಷ್ಪ ಪ್ರಸಾದವನ್ನು ಕಂಡು ಧನ್ಯವಾಯಿತು ಎನ್ನುತ್ತಾರೆ" ನಾಮಧಾರಕರು. ಇದೇ ಐವತ್ತೆರಡನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment