ಒಟ್ಟು ನೋಟಗಳು

Tuesday, July 4, 2017

ಗುರುನಾಥ ಗಾನಾಮೃತ 
ನನ್ನದೇನಿಹುದಯ್ಯ ಗುರುನಾಥಾ
ರಚನೆ: ಅಂಬಾಸುತ 


ನನ್ನದೇನಿಹುದಯ್ಯ ಗುರುನಾಥಾ
ನಿನ್ನದಹುದಿಹುದೆಲ್ಲಾ ಗುರುನಾಥಾ ||
ತನುಮನಧನವೆಲ್ಲಾ ನೀ ಕೊಟ್ಟ ಭಿಕ್ಷೆಯೋ
ತಣ್ಣಗೆ ಎನ್ನನಿರಿಸಿರುವುದೇ ನಿನ್ನ ರಕ್ಷೆಯೋ ||

ತಂದೆತಾಯಿ ಬಂಧು ಬಳಗಾ ಗುರುನಾಥಾ
ತೋರುತಿಹ ಜಗವೆಲ್ಲಾ ಗುರುನಾಥಾ 
ಧಾತಾ ವಿಧಾತಾ ನೀನೇ ಗುರುನಾಥಾ
ಅನಾಥ ನಾಥನೀ ಗುರುನಾಥಾ||

ರವಿಶಶಿ ಜಲ ವಾಯು ಗುರುನಾಥಾ
ರಾಮ ಕೃಷ್ಣ ಗೋವಿಂದ ಗುರುನಾಥಾ
ಪುರಹರ ಪರಮೇಶ್ವರ ಗುರುನಾಥಾ
ಜಗದಂಬೆಯಾ ರೂಪ ಗುರುನಾಥಾ ||

ವೇದಶಾಸ್ತ್ರ ಪುರಾಣದೊಳೂ ಗುರುನಾಥಾ
ವೀಣಾ ವೇಣು ನಾದದೊಳೂ ಗುರುನಾಥಾ
ಅನ್ನ ನೀರು ವಸ್ತ್ರವೂ ಗುರುನಾಥಾ
ಚರಾಚರ ಪರಾತ್ಪರ ಗುರುನಾಥಾ ||

ಸರ್ವಸ್ವ ಸಂಪೂರ್ಣ ಗುರುನಾಥಾ
ನಿನ್ನಂತಹವರಿನ್ಯಾರೋ ಗುರುನಾಥಾ
ಸಖರಾಯಪುರವಾಸಿ ಗುರುನಾಥಾ
ಅಂಬಾಸುತನ ಪಿತ ಗುರುನಾಥಾ ||

No comments:

Post a Comment