ಒಟ್ಟು ನೋಟಗಳು

Tuesday, July 18, 2017

ಗುರುನಾಥ ಗಾನಾಮೃತ 
ಸಖರಾಯಪುರವಾಸಗೇ ಮಂಗಳಾ
ರಚನೆ: ಅಂಬಾಸುತ 


ಸಖರಾಯಪುರವಾಸಗೇ ಮಂಗಳಾ
ಸುಖ ನೀಡೋ ಮಹನೀಯಗೇ
ಚಿತ್ತದೊಳಗೆ ಬಂದು ಚಿನುಮಯನಾಗಿ ನಿಂದೂ
ಚಂಚಲತೆ ಕಳೆದವಗೇ ||ಪ||

ಪ್ರೇಮ ಸ್ವರೂಪನಿಗೇ ಮಂಗಳಾ
ಮೋಹಮಾಯಾ ಭ್ರಮ ಹರಗೇ
ನಾನಾ ರೂಪವ ಧರಿಸೀ ಜಗದೋದ್ದಾರವಗೈದೂ
ನಾನತ್ವ ಕಳೆದವಗೇ ||೧||

ಬ್ರಹ್ಮಾಂಡ ವ್ಯಾಪಕಗೇ ಮಂಗಳಾ
ಬ್ರಹ್ಮಾನಂದ ನೀಡುವವಗೇ
ಎಲ್ಲೆಲ್ಲಿ ನೋಡಿದರಲ್ಲಲಗಲಿ ಕಾಣುತಾ
ಜಗವೇ ತಾನಾದವಗೇ ||೨||

ಶ್ರೀವೇಂಕಟಾಚಲಗೇ ಮಂಗಳಾ
ಅಂಬಾಸುತನ ಪ್ರಿಯಗೇ
ಶಾರದೆ ಮಡಿಲೊಳು ಯೋಗನಿದ್ರೆಯ ಗೈದಾ
ಅವಧೂತ ಗುರುವರಗೇ ||೩||

No comments:

Post a Comment