ಒಟ್ಟು ನೋಟಗಳು

Wednesday, July 12, 2017

ಗುರುನಾಥ ಗಾನಾಮೃತ 
ಬನ್ನಿರೋ ಬನ್ನಿರೋ ಬನ್ನೀರೋ ಗುರುಸೇವೆಯ ಮಾಡೋಣ ಬನ್ನೀರೋ
ರಚನೆ: ಅಂಬಾಸುತ 


ಬನ್ನಿರೋ ಬನ್ನಿರೋ ಬನ್ನೀರೋ ಗುರುಸೇವೆಯ ಮಾಡೋಣ ಬನ್ನೀರೋ
ಬನ್ನೀರೋ ಬನ್ನೀರೋ ಬನ್ನೀರೋ ಶುದ್ಧಅಂತಃಕರಣದಿ ಬನ್ನೀರೋ ||ಪ||

ಎಷ್ಟೋ ಜನ್ಮದ ಪುಣ್ಯವಿದೂ ನಮ್ಮಿಷ್ಟು ಮಂದಿಗೆ ದೊರಕಿಹುದೂ
ಕಾಡಿಬೇಡಿದರೂ ಸಿಗದಿದೂ ಗುರುಸೇವೆ ಕಷ್ಟಾಸಾಧ್ಯವಿದೂ||೧||

ಗುರು ಹರಿಯು ಗುರು ಹರನೂ ಗುರುಬ್ರಹ್ಮನೂ ಮರೆಯದಿರು ಗುರು ಸರ್ವೋತ್ತಮನೂ
ಗುರು ಅಂಧಾಕಾರವ ಕಳೆಯುವನೂ ಜ್ಞಾನ ದೀವಿಗೆಯಾಗೀ ಬೆಳಗುವನೂ ||೨||

ಗುರುಸೇವೆ ಪುಣ್ಯಾ ಸಾಧನಾ ಸರ್ವಪಾಪ ದೋಷ ನಿವಾರಣಾ
ಮುಕುತಿಗೆ ಇದೇ ಸುಲಭದ ಮಾರ್ಗಾ ಸಾರಿ ಹೇಳುತಿಹವೂ ಶ್ರುತಿವಾಕ್ಯಾ ||೩||

ಚಿತ್ತದ ಅರ್ಪಣೆ ಗುರುಸೇವೇ ಭಕ್ತಿವಿತ್ತದ ಅರ್ಪಣೆ ಗುರುಸೇವೇ
ದೇಹದ ದಂಡನೆ ಗುರುಸೇವೇ ಧನ್ಯತಾ ಭಾವನೆ ಗುರುಸೇವೇ ||೪||

ಸಖರಾಯಪುರವಾಸನಾ ಸೇವೆಗೇ ಶ್ರೀ ವೇಂಕಟಾಚಲನಾ ಸೇವೆಗೇ
ಅಂಬಾಸುತನ ಸದ್ಗುರುವಿನಾ ಸೇವೆಗೇ ಅಂತರಂಗದಾ ದೊರೆಯಾ ಸೇವೆಗೇ ||೫||

No comments:

Post a Comment