ಒಟ್ಟು ನೋಟಗಳು

Tuesday, July 25, 2017

ಗುರುನಾಥ ಗಾನಾಮೃತ 
ಇನ್ನೂ ಬರದಿಹನೇಕೇ ಗುರುನಾಥಾ
ರಚನೆ: ಅಂಬಾಸುತ 


ಇನ್ನೂ ಬರದಿಹನೇಕೇ ಗುರುನಾಥಾ
ಎನ್ನ ಕುಟಿಲತನವ ಬಿಟ್ಟೂ ಕೂಗಿ ಕರೆದರೂ ||ಪ||

ಹಳೆ ಕಸವನೆತ್ತಿ ಹೊರಹಾಕಿಹೆನೂ
ಮಡಿಯುಟ್ಟು ಮನಮನೆಯಾ ಮಡಿಮಾಡಿಹೆನೂ
ಜ್ಞಾನ ದೀವಿಗೆಯಾ ಬೆಳಗಿಹೆನೂ
ಭಕ್ತಿ ಎಂಬ ರಂಗೋಲಿಯಾ ಇಟ್ಟಿಹೆನೂ ||೧||

ಗುರುನಾಮ ಸ್ಮರಿಸುತಾ ಮಣೆಯ ಹಾಕಿಹೆನೂ
ಗುರುಭಿಕ್ಷೆಗೆ ಎಂದೇ ಮನಫಲ ತಂದಿಹೆನೂ
ಆರತಿಗೆಂದು ಆನಂದದ ಸೊಡಲಿಟ್ಟಿಹೆನೂ
ಗುರುಸೇವೆಗೆಂದೂ ಈ ತನುವ ಕಾಯ್ದಿರಿಸಿಹೆನೂ ||೨||

ಸಖರಾಯಪುರವಾಸಾ ಶ್ರೀ ವೇಂಕಟಾಚಲ
ನಿಜಭಕ್ತಿಯಿಂದಾ ಕರೆಯೇ ಓಡಿಬರುವ ಮಹನೀಯಾ
ಬಾರಯ್ಯ ಬಾ ಕರೆವೇ ಬಾರೋ ಎನ್ನಪ್ಪಾ
ತೋರೋ ನಿನ್ನಯ ಪಾದಾ ಬಿಗಿದಪ್ಪಿ ನಾ ಪಿಡಿವೇ ||೩||

No comments:

Post a Comment