ಒಟ್ಟು ನೋಟಗಳು

Monday, July 24, 2017

ಗುರುನಾಥ ಗಾನಾಮೃತ 
ನೀ ಎನ್ನ ದೊರೆಯೋ ಗುರುವರ್ಯಾ
ರಚನೆ: ಅಂಬಾಸುತ 


ನೀ ಎನ್ನ ದೊರೆಯೋ ಗುರುವರ್ಯಾ
ನಾ ನಿನ್ನ ದಾಸನೋ ಮಹನೀಯಾ ||ಪ||

ಎನ್ನದೆಂಬುದು ಏನಿಹುದೊ ಗುರುವರ್ಯಾ
ನಿನ್ನದಹುದಿಹುದೆಲ್ಲ ಮಹನೀಯಾ||೧||

ನೀನಿತ್ತ ಭಿಕ್ಷೆ ಈ ಬದುಕು ಗುರುವರ್ಯಾ
ನಿನ್ನಂತೆ ನೆಡೆವುದೀ ಜಗವು ಮಹನೀಯಾ ||೨||

ಅನ್ನವಾ ನೀಡುವವ ನೀನೇ ಗುರುವರ್ಯಾ
ಅಂತರಂಗದವಾಸಿ ನೀನೇ ಮಹನೀಯಾ ||೩||

ಭಾವ ನೀ ಜೀವ ನೀ ಗುರುವರ್ಯಾ
ಬೇಧಾಭೇಧ ಅಳಿಸೋ ನೀ ಮಹನೀಯಾ ||೪||

ಈ ತನುಮನದ ಪಾಲಕ ನೀ ಗುರುವರ್ಯಾ
ತಮ ಕಳೆದು ತನ್ಮಯತೆ ನೀಡೊ ಮಹನೀಯಾ ||೫||

ಸತ್ ಚಿತ್ ಆನಂದ ರೂಪ ಗುರುವರ್ಯಾ
ತತ್ವಪ್ರಭೋಧಕಾ ನೀನೇ ಮಹನೀಯಾ ||೬||

ಮಾಯೆ ಎಂಬುದ ಮರೆಮಾಚೋ ಗುರುವರ್ಯಾ
ಮೌನದನುಭವ ಎನಗೀಯೋ ಮಹನೀಯಾ ||೭||

ಬವಣೆಗಳ ಬದಿಗೊತ್ತೋ ಮನವ ಕೊಡೊ ಗುರುವರ್ಯಾ
ಹೊಸತನದ ಹಸಿರೊಳೊಗೆ ಎನ್ನನಿಡೊ ಮಹನೀಯಾ ||೮||

No comments:

Post a Comment