ಗುರುನಾಥ ಗಾನಾಮೃತ
ಶರಣಂ ಶರಣಂ ಗುರುನಾಥಾ
ರಚನೆ: ಅಂಬಾಸುತ
ಶರಣಂ ಶರಣಂ ಗುರುನಾಥಾ
ನಿನ್ನ ಚರಣವ ನಂಬಿದೆ ಗುರುನಾಥಾ ||ಪ||
ನನ್ನತನ ಕಳೆಯೋ ಗುರುನಾಥಾ
ನನ್ನೊಳಗೆ ನೆಲೆಸೋ ಗುರುನಾಥಾ
ನಾವಿಕ ನೀನೇ ಗುರುನಾಥಾ
ಈ ಭವಸಾಗರ ದಾಟಿಸೊ ಗುರುನಾಥಾ ||೧||
ಹರಿಹರ ಅಜ ರೂಪ ಗುರುನಾಥಾ
ಹರಿಸೆನ್ನ ಕರ್ಮವ ಗುರುನಾಥಾ
ಹರಣದಿ ನಿನ್ನ ನಾಮ ಗುರುನಾಥಾ
ಬರುವಂತೆ ಇರಿಸೆನ್ನ ಗುರುನಾಥಾ ||೨||
ಶಿಷ್ಯೋಧ್ಧಾರಕ ಗುರುನಾಥಾ
ಎನ್ನ ಚಿತ್ತಾಪಹಾರಕ ಗುರುನಾಥಾ
ಹತ್ತಿರದ ನಿಜಬಂಧು ಗುರುನಾಥಾ
ಹೂ ಒಳಗಣ ಗಂಧ ಗುರುನಾಥಾ ||೩||
ನಿಜ ಕಾಮಧೇನು ಗುರುನಾಥಾ
ತಪ್ಪನ್ನು ತಿದ್ದುವ ಗುರುನಾಥಾ
ಅಪ್ಪಿ ಬುದ್ದಿ ಹೇಳುವವ ಗುರುನಾಥಾ ||೪||
ನಿನಗಿಂತ ಜಗದೊಳು ಗುರುನಾಥಾ
ಸಖರಾಯಪುರವಾಸ ಗುರುನಾಥಾ
ಅಂಬಾಸುತನ ದೊರೆ ಗುರುನಾಥಾ ||೫||
No comments:
Post a Comment